ಪಿಲಿಕುಳ ಲೋಕಾಯುಕ್ತ ದಾಳಿ

0
57


ಮಂಗಳೂರು: ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದ ಆಡಳಿತ ಕಚೇರಿ ಮೇಲೆ ಶುಕ್ರವಾರ ಮಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಗಾನಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನ ಮತ್ತು ವಿಜ್ಞಾನ ಕೇಂದ್ರದ ಕಚೇರಿ ಮೇಲೆ ಈ ದಾಳಿ ನಡೆದಿದೆ.
ಹಣ ದುರುಪಯೋಗ ಆರೋಪದ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿ ನಿಸರ್ಗಧಾಮ ಇದೆ. ಪ್ರಾಧಿಕಾರದ ಅಧೀನ ವಿಜ್ಞಾನ ಕೇಂದ್ರ, ಉದ್ಯಾನವನವನ್ನು ಒಳಗೊಂಡಿದೆ.

Previous articleಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 40 ಕೋಟಿ ಹಗರಣ
Next articleಬೀದಿಗೆ ಬಿದ್ದ ಕೋಲಾರ ಕಾಂಗ್ರೆಸ್ ಜಗಳ : ರಮೇಶ್ ಕುಮಾರ್ ಪಟಾಲಂ ಎಂದ ಶಾಸಕ ಎಸ್.ಎನ್