ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಮುಂದೂಡಿಕೆ

0
21

ಬೆಳಗಾವಿ: ಡಿ. 23ಕ್ಕೆ ನಿಗದಿಯಾಗಿದ್ದ ಪಿಎಸ್ಐ ನೇಮಕಾತಿ ಮರು ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ.
ವಿಧಾನಸಭೆಯಲ್ಲಿಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಮಾಡಿದ ಆಗ್ರಹಕ್ಕೆ ಮಣಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಒಂದು ತಿಂಗಳ ಕಾಲ ಮುಂದೂಡಿದರು. ಡಿ. 23ರ ಬದಲು ಮುಂದಿನ ಜನವರಿ 23ಕ್ಕೆ ನಡೆಸುವುದಾಗಿ ಘೋಷಿಸಿದರು.

Previous articleಸದಾಶಿವ ಆಯೋಗ ವರದಿ ಜಾರಿಗೆ ಇಮ್ಮಡಿಶ್ರೀ ವಿರೋಧ
Next articleತಾಲೂಕು ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ: ಸಾರ್ವಜನಿಕರಿಂದ ಆಕ್ರೋಶ