ನವದೆಹಲಿ: ಭಾರತದ ಬಿಎಸ್‌ಎಫ್ ಯೋಧ ಪಿ.ಕೆ.ಸಿಂಗ್ ಅವರನ್ನು ಪಾಕಿ ಸ್ತಾನ ಸೆರೆ ಹಿಡಿದಿದೆ. ಪಂಜಾಬ್‌ನ ಫಿರೋಜ್‌ಪುರ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಪಾಕ್ ಗಡಿ ದಾಟಿ ಒಳ ಹೋಗಿದ್ದಕ್ಕೆ ವಶಕ್ಕೆ ಪಡೆಯಲಾಗಿದ. ಬಂಧಿತ ಯೋಧನನ್ನು ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಎಂದು ಗುರುತಿಸಲಾಗಿದೆ.
ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆ ಯಲ್ಲಿ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಡಿಯುದ್ದಕ್ಕೂ ಪಾಕಿಸ್ತಾನ ಸೇನೆ ಭದ್ರತೆಯನ್ನು ಹೆಚ್ಚಿಸಿದ್ದು, ಅಚಾನಕ್ ಆಗಿ ಒಳಗೆ ಹೋದ ಭಾರತೀಯ ಯೋಧನನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.
ಎರಡೂ ದೇಶಗಳ ನಡುವೆ ಗಡಿ ಮುಚ್ಚಿಲಾಗಿದೆ. ಇಂಥ ಸಮಯದಲ್ಲಿ ಯೋಧನನ್ನು ವಾಪಸ್ ಕರೆತರುವ ಹೊಣೆಗಾರಿಕೆ ಭಾರತದ ಮೇಲೆ ಬಿದ್ದಿದೆ. ಯೋಧ ಸಿಕ್ಕಿಬಿದ್ದಿರುವುದನ್ನು ಭಾರತದ ಅಧಿಕಾರಿಗಳು ಖಚಿತಪಡಿಸಿದ್ದು, ವಾಪಸ್ ಕರೆತರಲು ಮಾತುಕತೆ ನಡೆಯುತ್ತಿದೆ ಎಂದಿದೆ. ಬಿಎಸ್‌ಎಫ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.