ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ ನಿಷೇಧಿಸಿದ ಸರ್ಕಾರ

0
40

ನವದೆಹಲಿ: ಭಾರತದ ವಿರುದ್ಧ ಕೋಮು ಸೂಕ್ಷ್ಮ ವಿಷಯ ಮತ್ತು ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಪಾಕಿಸ್ತಾನದ 16 ಮಾಧ್ಯಮ ಯೂಟ್ಯೂಬ್ ಚಾನೆಲ್‌ಗಳನ್ನು ಸರ್ಕಾರ ನಿಷೇಧಿಸಿದೆ.
ಭಾರತ ಸರ್ಕಾರವು ಪಾಕಿಸ್ತಾನ ಮೂಲದ ಹಲವು ಯೂಟ್ಯೂಬ್ ಖಾತೆಗಳನ್ನು ನಿರ್ಬಂಧಿಸಿದ್ದು. ಗೃಹ ಸಚಿವಾಲಯವು ಡಾನ್ ನ್ಯೂಸ್, ಸಮಾ ಟಿವಿ, ಆರಿ ನ್ಯೂಸ್, ಸೇರಿದಂತೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು “ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು” ಪ್ರಸಾರ ಮಾಡಿದ್ದಕ್ಕಾಗಿ ಶಿಫಾರಸು ಮಾಡಿದೆ. ಈ ನಿಷೇಧವು ಏಪ್ರಿಲ್ 27, 2025 ರಿಂದ ಜಾರಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಜನಪ್ರಿಯ ಪ್ರವಾಸಿ ತಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಯೋತ್ಪಾದಕ ದಾಳಿಯ ನಂತರ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕೂ ಮೊದಲು, ಭಾರತವು ಪಾಕಿಸ್ತಾನ ಸರ್ಕಾರದ X ಖಾತೆಯನ್ನು ನಿರ್ಬಂಧಿಸಿತ್ತು .

ನಿಷೇಧಿತ ಚಾನೆಲ್‌ಗಳ ಪೂರ್ಣ ಪಟ್ಟಿ

Previous articleತಮ್ಮ ಬೇಜವಾಬ್ದಾರಿ ಹೇಳಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ
Next articleಕೋಲಾರ ಕೈಗಾರಿಕಾ ವಲಯದಲ್ಲಿ ಅಗ್ನಿ ಅವಘಡ