ಪಹಲ್ಗಾಮ್‌ ಉಗ್ರರ ದಾಳಿ: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ

0
11

ಶ್ರೀನಗರ: ನಿನ್ನೆಯ ಪಹಲ್ಗಾಮ್ ದುರಂತದಲ್ಲಿ ಸಂಕಷ್ಟಕ್ಕೆ ಈಡಾಗಿರುವ ಪಲ್ಲವಿ ಮತ್ತು ಅವರ ಮಗನನ್ನು ಶ್ರೀನಗರದಲ್ಲಿ ಇಂದು ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿದ್ದಾರೆ.
ಅವರನ್ನು ಭೇಟಿಯಾಗಿ ಸಾಂತ್ವನ ತಿಳಿಸಿ, ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಗೃಹ ಸಚಿವ ಅಮಿತ್‌ ಶಾ ಕೂಡ ಶ್ರೀನಗರದಲ್ಲಿ ಇದ್ದು, ಸಂಕಷ್ಟಕ್ಕೆ ಈಡಾಗಿರುವ ಕುಟುಂಬಗಳ ಜೊತೆ ಸಂಪರ್ಕದಲ್ಲಿ ಇದ್ದು, ಕನ್ನಡಿಗರನ್ನು ಬೆಂಗಳೂರಿಗೆ ಸುರಕ್ಷಿತ ವಾಪಸಾತಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರದ ಸಚಿವ ಸಂತೋಷ ಲಾಡ್‌ರೊಂದಿಗೆ, ಮೃತರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರು, ನಂತರ ಶಿವಮೊಗ್ಗಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಕಡೆಯ ವ್ಯಕ್ತಿಯೂ ಮನೆ ತಲುಪುವ ತನಕ ಅವರ ಜೊತೆಗೆ ಇರಲಿದ್ದೇವೆ.

Previous articleಯುಪಿಎಸ್‍ಸಿ: ಕನ್ನಡಿಗರ ಸಾಧನೆಗೆ ಸಿಎಂ ಅಭಿನಂದನೆ
Next articleಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಸಹಾಯವಾಣಿ