ಪರೀಕ್ಷೆ ಸರಿಯಾಗಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ

0
49
ಆತ್ಮಹತ್ಯೆ

ಮುಂಡಗೋಡ: ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡ ಬಾಲಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ ಬಸವಬೀದಿಯ ಅರಹಾನ ಬಾಹುಬಲಿ ಚಿವಟೆ(16) ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕಳೆದ ತಿಂಗಳು ನಡೆದ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಬೆರೆದಿದ್ದ ಈ ಬಾಲಕ ಅದು ಸರಿಯಾಗಲಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡಿದ್ದ. ಮನೆಯಲ್ಲಿ ಇರುವ ಫ್ಯಾನ್‌ಗೆ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಆತನ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleಹೈಕಮಾಂಡ್ ಪ್ರಶ್ನೆಗೆ ಉತ್ತರಿಸುವೆ
Next articleಇತರೆ ಶಾಸಕರಿಗೆ ಎಚ್ಚರಿಕೆಯ ಘಂಟೆ