ಪರೀಕ್ಷೆ ಬರೆಯಲು ಹಣ ಪಡೆದ ಆರೋಪ: ಪ್ರಾಂಶುಪಾಲ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

0
12

ಫೋನ್ ಪೇ ಮೂಲಕ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ

ಚಿಕ್ಕಮಗಳೂರು: ಗೈರು ಹಾಜರಾದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲು ಹಣ ಪಡೆದ ಆರೋಪದ ಮೇಲೆ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೀರೂರು ಪ್ರಥಮ ದರ್ಜೆ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿ.ಟಿ. ಹರೀಶ್ ರವರಿಂದ ಹಣದ ಬೇಡಿಕೆಯನ್ನು ಇಟ್ಟು ಹಣ ಪಡೆದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಫೋನ್ ಪೇ ಮೂಲಕ 10 ಸಾವಿರ ರೂ, ಪಡೆದಿದ್ದು, ಹಾಗೂ ಪ್ರಾಂಶುಪಾಲ ಎಂ.ಕೆ. ಪ್ರವೀಣ್ ಕುಮಾರ್ 5000 ರೂ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ, ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಎಂ.ಕೆ ಪ್ರವೀಣ್ ಕುಮಾರ್ ಮತ್ತು ಪ್ರಥಮ ದರ್ಜೆಯ ಸಹಾಯಕ ಸದಾಶಿವಯ್ಯ ರವರನ್ನು ಲೋಕಾಯುಕ್ತ ಪೊಲೀಸರು ಬಂಧಿದ್ದಾರೆ. ಕಾರ್ಯಚರಣೆಯಲ್ಲಿ ಡಿವೈಎಸ್ಪಿ ತಿರುಮಲೇಶ್, ಬಿ.ಮಲ್ಲಿಕಾರ್ಜುನ್, ಅನಿಲ್ ರಾಥೋಡ್ ಇತರರು ಪಾಲ್ಗೊಂಡಿದ್ದರು.

Previous articleಮೇಕ್ ಇನ್ ಇಂಡಿಯಾ : ಭಾರತದ ಪ್ರಗತಿ ಮುಂದುವರಿಯುತ್ತದೆ…
Next articleಇಂದಿನಿಂದ ಶಾಲೆಗಳಲ್ಲಿ ವಾರದ 6 ದಿನ ಮೊಟ್ಟೆ