ಲಿಂಗಸಗೂರು: ಪತಿಯನ್ನು ಕತ್ತುಹಿಸುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿಗೆ 3ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಲಿಂಗಸಗೂರು ನ್ಯಾಯಾಧೀಶರಾದ ಬಿ.ಬಿ. ಜಕಾತಿರವರು ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂಪಾಯಿಗಳ ದಂಡ ವಿಧಿಸಿ ಶುಕ್ರವಾರ ಮೇ ಎರಡರಂದು ಬಹಿರಂಗ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದ್ದಾರೆ.
ತಾಲೂಕಿನ ರೋಡಲಬಂಡಾ (ಯು.ಕೆ.ಪಿ) ವಸತಿಗೃಹದಲ್ಲಿ ದಿ. ೧೮-೭-೨೦೧೮ ರಂದು ರಾತ್ರಿ ೧೧:೩೦ ಗಂಟೆಗೆ ಸರಸ್ವತಿ ಎಂಬುವವರು ತನ್ನ ಗಂಡನಾದ ಮಹಾಂತೇಶ್ ಇವರನ್ನು ಕತ್ತುಹಿಸುಕಿ ಕೊಲೆ ಮಾಡಿದ್ದಾರೆಂದು ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಲಿಂಗಸಗೂರು ವೃತ್ತದ ಸಿಪಿಐ ವಿ.ಎಸ್. ಹಿರೇಮಠ್ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣವನ್ನು ಸರಕಾರಿ ಅಭಿಯೋಜಕರಾದ ಆರ್.ಎ. ಗಡಕರಿಯವರು ವಾದ ಮಂಡಿಸಿದ್ದರು. ಠಾಣೆಯ ಪಿ.ಸಿ ನಿಂಗಯ್ಯ ರವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.