ವಾಡಿ: ಪಟ್ಟಣದ ಹೊರ ವಲಯದ ಬಳಿರಾಮ ಚೌಕ್ ದಿಂದ ಪ್ರಾರಂಭಗೊಂಡ ಬೃಹತ್ ಸಂವಿಧಾನ ಜಾಗೃತಿ ಜಾಥಾದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿ ಫೌಜೀಯ ತರುನ್ನಮ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಡೊಳ್ಳಿನ ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ, ಲಂಬಾಣಿಗರ ನೃತ್ಯ, ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧ ಚಿತ್ರ, ಮಳಖೇಡ ರಾಷ್ಟ್ರಕೂಟರ ಕೊಟೆಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಬಳಿರಾಮ ಚೌಕ್ ವೃತದಿಂದ ಮೂಲಕ ಪ್ರಾರಂಭವಾದ ಮೆರವಣಿಗೆ ಶ್ರೀಸೇವಾಲಾಲ್ ಮಂದಿರ, ಕುಂದನೂರ ಚೌಕ್ ವೃತ್ತ, ಮೌಲಾನ ಅಬ್ದುಲ್ ಕಲಾಂ ಅಜಾದ್ ವೃತ್ತ, ಡಾ.ಅಂಬೇಡ್ಕರ್ ವೃತ್ತ ಹಾಗೂ ಶ್ರೀಬಸವೇಶ್ವರ ವೃತ್ತದ ಮೂಲಕ ತೆರಳಿ ವೇದಿಕೆ ತಲುಪಿತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳೆಯರು ಬಣ್ಣ ಬಣ್ಣದ ಉಡುಪು ಧರಿಸಿ ನೋಡುಗರ ಗಮನ ಸೆಳೆದರು. ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಜಿಪಂ ಸಿಇಒ ಭವರಸಿಂಗ್ ಮೀನಾ ಹಾಗೂ ದಲಿತ ಹಿರಿಯ ಮುಖಂಡ ಟೋಪಣ್ಣ ಕೊಮಟೆ ಹಾಗೂ ಕಲಾತಂಡದವರು ಇದ್ದರು.