ನೋಟಿಸ್‌ ವಾಪಾಸ್ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ

0
24

ಬೆಂಗಳೂರು: ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್‌ ಬೋರ್ಡ್​ನಿಂದ ನೋಟಿಸ್ ವಿಚಾರವಾಗಿ ನಮ್ಮ ಹೋರಾಟ ಪ್ರಾರಂಭ ಆಗುವ ಮುಂಚೆಯೇ ರಾಜ್ಯ ಸರ್ಕಾರ ಶರಣಾಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಕ್ಫ್ ಮಂಡಳಿ ರೈತರಿಗೆ ನೀಡಿರುವ ನೋಟೀಸನ್ನು ವಾಪಾಸ್ ಪಡೆಯುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲರು ಹೇಳಿದ್ದಾರೆ. ಆದರೆ, ನೋಟೀಸನ್ನು ವಾಪಾಸ್ ಪಡೆಯುವುದರೊಂದಿಗೆ, ಪಹಣಿಯಲ್ಲಿ ವಕ್ಫ್ ಬೋರ್ಡ್ ಇಂಡೀಕರಣವನ್ನು ತೆಗೆದು ಹಾಕಬೇಕು. ಇವೆಲ್ಲ ಪ್ರಕ್ರಿಯೆಯನ್ನು ನವಂಬರ್ 3 ರ ಒಳಗೆ ಮುಗಿಸಿದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಆಗುವುದು ನಿಶ್ಚಿತ ಎಂದಿದ್ದಾರೆ.

Previous articleವಿಜಯೇಂದ್ರ ನಮ್ಮ ನಾಯಕನಲ್ಲ…
Next articleಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣ: ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಬಂಧನ