ನೈವೇದ್ಯ ಮಾಡಬೇಕಾದ ಕೈಗಳಿಗೆ ಸಂಕೋಲೆ

0
16

ವಿನಾಶಕಾಲೇ ವಿಪರೀತ ಬುದ್ಧಿ, ಕಡುಬು, ಮೋದಕ ಇಟ್ಟು ನೈವೇದ್ಯ ಮಾಡಬೇಕಾದ ಕೈಗಳಿಗೆ ಸಂಕೋಲೆ ತೊಡಿಸಿದೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭಕ್ತರ ಜಯಘೋಷ, ಮಂಗಳ ವಾದ್ಯಗಳ ಮಧ್ಯೆ ಭವ್ಯವಾದ ಮೆರವಣಿಗೆಯಲ್ಲಿ ಸಾಗಬೇಕಾದ ಗಣೇಶನನ್ನ ಪೊಲೀಸ್ ವ್ಯಾನ್ ಹತ್ತಿಸಿದೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ. ದೀಪ ಆರುವುದಕ್ಕೂ ಮುಂಚೆ ಜೋರಾಗಿ ಉರಿಯುತ್ತದೆ ಎಂಬ ಮಾತಿದೆ. ಹಾಗೆಯೇ ಈ ಧರ್ಮದ್ರೋಹಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಸರ್ವನಾಶವಾಗುವ ದಿನ ದೂರವಿಲ್ಲ ಎಂಬ ಎಲ್ಲ ಲಕ್ಷಣಗಳೂ ಸುಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದಿದ್ದಾರೆ.

Previous articleಸೆಪ್ಟೆಂಬರ್ 16 ರಿಂದ RE-INVEST 2024
Next articleಪಾನಮತ್ತ ಚಾಲನೆ ಮೃತ್ಯುಗೆ ಆಹ್ವಾನ..!