ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಕಾರ್ಯಾಚರಣೆಯ ಕಾರಣಗಳಿಂದ ಹಾಗೂ ಮುಂಬರುವ ರಥಯಾತ್ರೆ ಉತ್ಸವದ ಹಿನ್ನೆಲೆಯಲ್ಲಿ ಕೆಲವು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೈಋತ್ಯ ರೈಲ್ವೆಯು ವಿಷಯ ಹಂಚಿಕೊಂಡಿದೆ
ಕೇಂದ್ರ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 07315 ಎಸ್‌ಎಸ್‌ಎಸ್ ಹುಬ್ಬಳ್ಳಿ – ಮುಜಾಫರ್‌ಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 30.06.2025 ರಂದು ಹಾಗೂ ರೈಲು ಸಂಖ್ಯೆ 07316 ಮುಜಾಫರ್‌ಪುರ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 03.07.2025 ರಂದು ರಂದು ಪ್ರಾರಂಭವಾಗುವ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 06281 ಮೈಸೂರು – ಅಜೀರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 21.06.2025 ಮತ್ತು 28.06.2025 ರಂದು ಹಾಗೂ ರೈಲು ಸಂಖ್ಯೆ 06282 ಅಜೀರ್ – ಮೈಸೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 23.06.2025 ಮತ್ತು 30.06.2025 ರಂದು
ಪ್ರಾರಂಭವಾಗುವ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
ರಥಯಾತ್ರೆ ಉತ್ಸವದ ಹಿನ್ನೆಲೆಯಲ್ಲಿ ಉಂಟಾಗುವ ನಿರ್ಬಂಧಗಳಿಂದಾಗಿ ಈ ಕೆಳಗಿನ ರೈಲುಗಳ ಸೇವೆ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 07325 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕಟಿಹಾರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 18.06.2025 ರಂದು ಹಾಗೂ ರೈಲು ಸಂಖ್ಯೆ 07326 ಕಟಿಹಾ ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 21.06.2025 ರಂದು ರಂದು ಪ್ರಾರಂಭವಾಗುವ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 06565 ಎಸ್‌ಎಂವಿಟಿ ಬೆಂಗಳೂರು – ಮಾಲ್ಲ್ಯಾ ಟೌನ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 22.06.2025 ಮತ್ತು 29.06.2025 ರಂದು ಹಾಗೂ ರೈಲು ಸಂಖ್ಯೆ 06566 ಮಾಲ್ಯಾ ಟೌನ್ ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 25.06.2025 ಮತ್ತು 02.07.2025 ರಂದು ಪ್ರಾರಂಭವಾಗುವ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 06559 ಎಸ್‌ಎಂವಿಟಿ ಬೆಂಗಳೂರು – ನಾರಂಗಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 17.06.2025 ಮತ್ತು 24.06.2025 ರಂದು ಹಾಗೂ ರೈಲು ಸಂಖ್ಯೆ 06560 ನಾರಂಗಿ – ಎಸ್‌ಎಂಐಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 21.06.2025 ಮತ್ತು 28.06.2025 ರಂದು ಪ್ರಾರಂಭವಾಗುವ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.