ಬೀದರ್: ಬ್ರಿಮ್ಸ್ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ.ಮಹ್ಮದ್ ಸೋಹೆಲ್ ಅಹ್ಮದ್(೨೯) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಟ್ಟಾ ಕಾದಿಟ್ಟ ಅರಣ್ಯದಲ್ಲಿ ಬುಧವಾರ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ನಗರದ ರಾವ್ ತಾಲೀಮ್ ನಿವಾಸಿಯಾದ ಸೋಹೆಲ್ ಸೆ. ೪ರಂದು ಕಾಣೆಯಾಗಿರುವ ಬಗ್ಗೆ ಅವರ ತಂದೆ ಚೌಬಾರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಳ್ಳಿಖೇಡ್(ಬಿ) ಪಟ್ಟಣದಲ್ಲಿ ಕ್ಲಿನಿಕ್ ಹಾಕಲು ಬಹಳಷ್ಟು ಸಾಲವನ್ನು ಸೋಹೆಲ್ ಮಾಡಿಕೊಂಡಿದ್ದ. ಕ್ಲಿನಿಕ್ ಸರಿಯಾಗಿ ನಡೆಯದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಗಾಂಧಿ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
                

























