ನೆರೆ ಹಾನಿ ಪ್ರದೇಶಗಳಿಗೆ ಬಿಜೆಪಿ ನಿಯೋಗ

0
9

ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಹೊರ ಹರಿವು ಹಿನ್ನೆಲೆಯಲ್ಲಿ ಜಿಲ್ಲೆಯ ನೆರೆ ಸಂತ್ರಸ್ತ‌ ಗ್ರಾಮಗಳಿಗೆ ಮಾಜಿ‌ ಸಚಿವ‌ ಬಿ.ಶ್ರೀರಾಮುಲು ನೇತೃತ್ವದ ನಿಯೋಗ ಭೇಟಿ‌ ನೀಡಿ ಪರಿಶೀಲಿಸಿತು.
ಮಳೆ‌ ಮತ್ತು‌ ನೆರೆ ಬಾಧಿತ ಪ್ರದೇಶಗಳಿಗೆ ರಾಜ್ಯ ಬಿಜೆಪಿ‌ಯಿಂದ ರಾಜ್ಯಾದ್ಯಂತ 6 ತಂಡಗಳಾಗಿ ಪ್ರವಾಹ ಅಧ್ಯಯನ ಆರಂಭಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲೂ ಶ್ರೀರಾಮುಲು ನೇತೃತ್ವದಲ್ಲಿ ಪ್ರವಾಸ ನಡೆದಿದ್ದು,‌ ನೆರೆ ಹಾನಿಯಾದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಮತ್ತು ನಿಟ್ಟೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆಯಿಂದ ಹಾನಿಯಾದ ಬಗ್ಗೆ ವಿವರ ಆಲಿಸಿದರು. ಗ್ರಾಮಸ್ಥರ‌ ಜತೆ ಚರ್ಚಿಸಿ ಅವರ ಮನವಿಗಳನ್ನು ಆಲಿಸಿದರು. ಬಳಿಕ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ‌ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್, ಮಾಜಿ ಶಾಸಕರಾದ ಸೋಮಲಿಂಗಪ್ಪ ತಾಲೂಕು ಪದಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Previous articleಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ಇನ್ನಿಲ್ಲ
Next articleಭಾರತಕ್ಕೆ ೩ನೇ ಪದಕ ತಂದಿತ್ತ ಸ್ವಪ್ನಿಲ್ ಕುಸಾಲೆ