ಕೊಪ್ಪಳ: ಸಮೀಪದ ಭಾಗ್ಯನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸೋಮವಾರ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಅದ್ಧೂರಿಯಾಗಿ ಕಾರ್ತಿಕೋತ್ಸವ ಜರುಗಿತು.
ಕುರಿಹಿನಶೆಟ್ಟಿ ಸಮಾಜದ ಮಹಿಳೆಯರು ಹಣತೆಗಳಲ್ಲಿ ದೀಪ ಹಚ್ಚುವ ಮೂಲಕ ಭಕ್ತಿ ಮೆರೆದರು. ನೀಲಕಂಠೇಶ್ವರನ ದರ್ಶನ ಪಡೆದು, ಕೃತಾರ್ತರಾದರು. ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ಭಾಗ್ಯನಗರದ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ನೀಲಕಂಠಪ್ಪ ಮೈಲಿ, ಕಾರ್ಯದರ್ಶಿ ಕೊಟ್ರೇಶ ಪೋಚಗುಂಡಿ, ಮುಖಂಡರಾದ ಮರಿಹನುಮಂತಪ್ಪ ಕವಲೂರು, ಈರಣ್ಣ ನಂದ್ಯಾಲ, ಶ್ರೀನಿವಾಸ ಹ್ಯಾಟಿ, ಕೊಟ್ರಪ್ಪ ಶೇಡ್ಮಿ, ಸುರೇಶ ಪೆದ್ದಿ, ಉದಯ ಹೊಟ್ಟಿ ಸೇರಿದಂತೆ ಹಲವರು ಇದ್ದರು.