ನಿವೃತ್ತ ಸೇನಾನಿಗೆ ಭಾರೀ ಸ್ವಾಗತ

0
11

ದಾವಣಗೆರೆ: ದೇಶದ ಗಡಿ ಭಾಗಗಳಾದ ಜಮ್ಮು, ಕಾಶ್ಮೀರ್, ಪಂಜಾಬ್, ರಾಜಸ್ಥಾನ್, ಅಸ್ಸಾಂ ಸೇರಿದಂತೆ ವಿವಿಧೆಡೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಬಲ್ಲೂರು ಗ್ರಾಮದಶ್ರೀ ಬಸವರಾಜ್ ರನ್ನು ಮಂಗಳವಾರ ಭವ್ಯವಾಗಿ ಸ್ವಾಗತಿಸಲಾಯಿತು.
ಪುಷ್ಪ ಗುಚ್ಛ ನೀಡಿ , ಆರತಿ ಬೆಳಗಿ ಜಯಕಾರ ಹಾಕಿ ಅಭಿನಂದಿಸಲಾಯಿತು.ಜನ ಶತಾಬ್ದಿ ರೈಲಿನಲ್ಲಿ ಬಂದ ಯೋಧನಿಗೆ ಸಾರ್ವಜನಿಕರು ಸಹ ಕೈ ಮಿಲಾಯಿಸಿ ಸ್ವಾಗತಿಸಿದರು. ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಎಸ್.ಟಿ. ವೀರೇಶ್, ಕೊಳೆನಹಳ್ಳಿ ಸತೇಶ್ ಸೇರಿದಂತೆ ಇತರರು ಇದ್ದರು

Previous articleಚಿಂತಕರ ಚಾವಡಿಯಲ್ಲಿ ಮಿಥ್ಯಾರೋಪ ಮಾಡಿ ಘನತೆಗೆ ಚ್ಯುತಿ ತರಬೇಡಿ
Next articleಪ್ರತಿ ಕನ್ನಡಿಗನ ಮೇಲೆ 1 ಲಕ್ಷ ಸಾಲದ ಹೊರೆ