ನಿಮ್ಮನ್ನು ಮೋದಿ ಕಾಪಾಡುತ್ತಾನೆ

0
21
ಮೋದಿ

ಹೊಸಪೇಟೆ: ನಿಮ್ಮ ಸಂಪತ್ತಿನ ಮೇಲೂ ಕೂಡ ಕಾಂಗ್ರೆಸ್ ಕಣ್ಣು ಹಾಕಿದೆ. ಇದು ಬಹುದೊಡ್ಡ ಎಚ್ಚರಿಕೆಯ ಗಂಟೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹೊಸಪೇಟೆಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನರ ಆಸ್ತಿ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ. ಕಾಂಗ್ರೆಸ್​ನವರು ಇದಕ್ಕೆ ಕಾನೂನೇ ತರಲು ಹೊರಟಿದ್ದಾರೆ. ನಮ್ಮ ಮನೆಯವರು ಕಷ್ಟಪಟ್ಟು ದುಡಿದು ಅಲ್ಪಸ್ವಲ್ಪ ಉಳಿಸಿದ ಹಣಕ್ಕೂ ಕೂಡ ಕಾಂಗ್ರೆಸ್ ಕಣ್ಣು ಹಾಕಿದೆ. ನಿಮ್ಮ‌ ನಿಮ್ಮ ಮಕ್ಕಳಿಗೆ ಕೂಡಿಟ್ಟ ಹಣ ಸರ್ಕಾರ ಕೊಳ್ಳೆ ಹೊಡೆಯಲು ಬಿಡಬೇಕಾ? ನಿಮ್ಮ ರಕ್ಷಣೆ ಹಾಗಿದ್ದರೆ ಯಾರು ಮಾಡಲು ಸಾಧ್ಯ? ನಾನು ನಿಮಗೆ ಗ್ಯಾರಂಟಿ ನೀಡ್ತೇನೆ ನಿಮ್ಮನ್ನು ಮೋದಿ ಕಾಪಾಡುತ್ತಾನೆ ಎಂದರು.

Previous articleದೆಹಲಿಯಲ್ಲಿ ದಲ್ಲಾಳಿಗಳಿಗೆ ಈಗ ಜಾಗವಿಲ್ಲ
Next articleಮುಸ್ಲಿಮರ ತುಷ್ಟೀಕರಣ ಬಿಟ್ಟರೆ ಕಾಂಗ್ರೆಸ್‌ಗೆ ಬೇರೆ ಅಜೆಂಡಾಗಳಿಲ್ಲ