ನಿಗಮ ಮಂಡಳಿಗೆ ಲಂಚ ಸ್ವೀಕಾರ ಸತ್ಯಕ್ಕೆ ದೂರ: ಶಾಸಕ‌ ರಮೇಶ್

0
14

ಶ್ರೀರಂಗಪಟ್ಟಣ: ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿ‌ ಸ್ಥಾನಕ್ಕೆ ಶಾಸಕರಿಂದ ಲಂಚ ಸ್ವೀಕಾರ ಮಾಡುತ್ತಿದೆ ಎಂಬ ವಿರೋಧ ಪಕ್ಷದವರ ಆರೋಪ‌ ಸತ್ಯಕ್ಕೆ‌ ದೂರ ಎಂದು ಶಾಸಕ‌ ರಮೇಶ್ ಬಂಡಿಸಿದ್ದೇಗೌಡ ಖಂಡಿಸಿದರು.
ಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತದ ಬಳಿ ಪಿಎಲ್‌ಡಿ‌ ಬ್ಯಾಂಕ್‌ ಎದುರು‌ ರಸ್ತೆಯಿಂದ ಜಾಮಿಯಾ ಮಸೀದಿ,‌ ಪೊಲೀಸ್ ಕ್ವಾರ್ಟರ್ಸ್, ಸ್ನಾನಘಟ್ಟ, ತಾಲ್ಲೂಕು ಕಚೇರಿ‌ ಮಾರ್ಗವಾಗಿ‌ ಅಂಬೇಡ್ಕರ್ ವೃತ್ತದ ವರೆಗಿನ ರಸ್ತೆ ಅಭಿವೃದ್ಧಿಯ 4 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆರೋಪ ಮಾಡುವವರು ಮೊದಲು‌ ಅವರ ಪಕ್ಷ ಅಧಿಕಾರದಲ್ಲಿ ಇದ್ದಾಗ ನಿಗಮ ಮಂಡಳಿಗೆ ಯಾವ್ಯಾವ ಶಾಸಕರಿಂದ ಎಷ್ಟೆಷ್ಟು‌ ಹಣ ಪಡೆದಿದ್ದರು ಎಂಬುದನ್ನು‌ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರ ಹಿರಿಯ ಶಾಸಕರು ಹಾಗೂ ಪಕ್ಷಕ್ಕಾಗಿ ದುಡಿದ‌ ಶಾಸಕರುಗಳಿಗೆ ಮನ್ನಣೆ ನೀಡಲಿದೆ‌ ಎಂದು ಅವರು ಸ್ಪಷ್ಟಪಡಿಸಿದರು.

Previous articleಅಪಘಾತ: ಚಿರತೆ ಸಾವು
Next articleಜಾತಿ ಗಣತಿ ಬಿಡುಗಡೆಯಾದ್ರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಚ್ಯುತಿ