ನಾಳೆ ಹುಬ್ಬಳ್ಳಿ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ

0
16

ಬೆಂಗಳೂರು: ಹಳೇ ಕೇಸುಗಳಿಗೆ ಮರುಜೀವ ನೀಡಿ ಕರಸೇವಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ಅತ್ಯಂತ ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಹುಬ್ಬಳ್ಳಿ ಪ್ರಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಅಲ್ಪಸಂಖ್ಯಾತರ ಮೇಲೆ ಮಮಕಾರ ಹಿಂದೂಗಳೆಂದರೆ ತಾತ್ಸಾರ ಅಲ್ಪಸಂಖ್ಯಾತರ ಮೇಲೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ ತೋರುವ ಸಿಎಂ ಸಿದ್ದರಾಮಯ್ಯನವರಿಗೆ ರಾಮಭಕ್ತರ ಮೇಲೆ ಏಕಿಷ್ಟು ದ್ವೇಷ, ಹಗೆತನ? ಕೇಸರಿ ಬಣ್ಣ, ಕುಂಕುಮ ಕಂಡರೆ ಕಾಂಗ್ರೆಸ್ ಪಕ್ಷಕ್ಕೆ ಏಕಿಷ್ಟು ಅಸಹ್ಯ? ಹಳೇ ಕೇಸುಗಳಿಗೆ ಮರುಜೀವ ನೀಡಿ ಕರಸೇವಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ಅತ್ಯಂತ ಖಂಡನೀಯ.
ರಾಮಜನ್ಮಭೂಮಿ ಹೋರಾಟಗಾರರ ಬಂಧನ ಖಂಡಿಸಿ ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ. ಸ್ವಯಂಸೇವಕರು, ಕರಸೇವಕರು, ಹಿಂದೂ ಕಾರ್ಯಕರ್ತರ ವಿರುದ್ಧ ಎಲ್ಲೇ ದೌರ್ಜನ್ಯ ನಡೆದರೂ ಅವರ ಬೆನ್ನಿಗೆ ನಿಲ್ಲುತ್ತೇನೆ. ಕಾಂಗ್ರೆಸ್ ಸರ್ಕಾರ ನನ್ನನ್ನೂ ಬೇಕಿದ್ದರೆ ಬಂಧಿಸಲಿ, ಕೇಸು ದಾಖಲಿಸಲಿ ಎಂದಿದ್ದಾರೆ.

Previous articleಜಪಾನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ
Next articleಜನವರಿ 4 ರಂದು ನಂಜನಗೂಡು ಬಂದ್‌ಗೆ ಕರೆ