ಹುಬ್ಬಳ್ಳಿ: ಮಹದಾಯಿಗೆ ಕೇಂದ್ರದ ಅನುಮೋದನೆ ಕೊಡಿಸಿದರೆ ನಾಳೆಯೇ ಕೆಲಸ ಆರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಇತರ ರಾಜ್ಯ ಬಿಜೆಪಿ ನಾಯಕರು ಮೋದಿ ಸರ್ಕಾರದಿಂದ ಏಕೆ ಅನುಮೋದನೆ ಕೊಡಿಸಲು ಆಗುತ್ತಿಲ್ಲ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.ಮಹದಾಯಿಗೆ ಅನುಮೋದನೆ ಸಿಕ್ಕಿಯೇ ಬಿಟ್ಟಿದೆ. ಯೋಜನೆಯನ್ನು ನಾವೇ ಜಾರಿ ಮಾಡುತ್ತೇವೆ ಎಂಬುದಾಗಿ ೨೦೧೭ರಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿಯೇ ಹೇಳಿ, ಗೋವಾ ಸಿಎಂ ಪತ್ರವನ್ನೂ ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಬಚಾವತ್ ಐತೀರ್ಪಿನ ವಿರುದ್ಧ ಕೃಷ್ಣಾ ಯೋಜನೆಯ ಅಧಿಸೂಚನೆಯನ್ನು ಹದಿಮೂರು ವರ್ಷಗಳಾದರೂ ಜಾರಿಗೊಳಿಸದ ಕೇಂದ್ರದ ಕ್ರಮವನ್ನು ಸಿದ್ದರಾಮಯ್ಯ ಖಂಡಿಸಿದರು.
೨೦೧೨ರಲ್ಲೇ ತೀರ್ಪು ಬಂದಾಗ್ಯೂ ಕೇಂದ್ರ ಸರ್ಕಾರ ಈತನಕ ಅಂತಿಮ ಅಧಿಸೂಚನೆ ಜಾರಿಗೊಳಿಸಿಲ್ಲ. ಹೀಗಾಗಿ ರಾಜ್ಯದ ಪಾಲಿನ ನೀರಿನ ಬಳಕೆಯಲ್ಲಿ ಹಿನ್ನಡೆಯಾಗಿದೆ’ ಎಂದರು.