ಹಾವೇರಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಸ್ಫರ್ಧಿಸಿದ್ದ ಶಿಗ್ಗಾಂವಿ ಬೈಎಲೆಕ್ಷನ್ ರಿಸಲ್ಟ್ ಹೊರಬೀಳಲಿದ್ದು. ನಾಲ್ಕನೇ ಸುತ್ತು ಮುಕ್ತಾಯಗೊಂಡಿದ್ದು, 11 ಗಂಟೆಗೆಲ್ಲಾ ಗೆಲ್ಲೋದು ಯಾರು ಅನ್ನೋ ಬಗ್ಗೆ ಒಂದು ಪಿಚ್ಚರ್ ಸಿಗಲಿದೆ. ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿಯ ಭರತ ಬೊಮ್ಮಾಯಿ : 21910, ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 20343, ಬಿಜೆಪಿ ಅಭ್ಯರ್ಥಿಗೆ 1567 ಮತಗಳ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್‌ಗೆ ಹಿನ್ನಡೆಯಾಗಿದೆ.