ನಾಲೆಗಳಿಗೆ ನೀರು ಹರಿಸುವಂತೆ ರೈತರಿಂದ ಪ್ರತಿಭಟನೆ

0
15

ಶ್ರೀರಂಗಪಟ್ಟಣ : ಜನ – ಜಾನುವಾರುಗಳ ರಕ್ಷಣೆಗಾಗಿ ಕೂಡಲೇ ಜಿಲ್ಲೆಯ ಎಲ್ಲಾ ನಾಲೆಗಳಿಗೂ ನೀರು ಹರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.

ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ‌ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಸರ್ಕಾರ ನಾಲೆಗಳಿಗೆ ನೀರು ಹರಿಸದೆ ರೈತರಿಗೆ ವಿಷವುಣಿಸುವ ಭಾಗ್ಯ ನೀಡಲು ಮುಂದಾಗಿದೆ. ಈಗಾಗಲೇ ಬೆಳೆಯಿಲ್ಲದೆ ಕಂಗಾಲಾಗಿರುವ ನಮಗೆ ಇರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾದರೂ ನಾಲೆಗಳಿಗೆ ನೀರು ಹರಿಸಬೇಕು.

ಜಿಲ್ಲೆಯ ಶಾಸಕರುಗಳು,‌‌ ಸಚಿವರು ಈ ಬಗ್ಗೆ ಮೌನವಹಿಸಿದ್ದು, ರೈತರಿಗೆ ಅನ್ಯಾಯ ಮಾಡುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ದವೂ ಘೋಷಣೆ ಕೂಗಲಾಯಿತು.

Previous articleನಾಲ್ಕು ಕೆಜಿ ಒಣ ಗಾಂಜಾ ವಶ
Next articleCSK ನಾಯಕತ್ವ ತೊರೆದ ಧೋನಿ