ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಡೂರಿನ ನಾರಿಹಳ್ಳ ಕಿರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ದೇವರಾಜ ಅರಸು ಅವರ ನಂತರ ನಾರಿಹಳ್ಳ ಜಲಾಶಯಕ್ಕೆ ಆಗಮಿಸಿದ ಎರಡನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ. ಸಂಡೂರು ತಾಲೂಕಿನ ನಾರಿಹಳ್ಳ ಕಿರು ಡ್ಯಾಂ 0.810 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು 615 ಕಿ.ಮೀ. ವಿಸ್ತೀರ್ಣ ಇದೆ.
ಈ ಜಲಾಶಯ ಸಂಡೂರಿನ 20 ಗ್ರಾಮಗಳಿಗೆ ಕುಡಿಯುವ ನೀರಿಗೆ ಆಧಾರ ಆಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್, ಶಾಸಕರಾದ ಶ್ರೀನಿವಾಸ್, ಕಂಪ್ಲಿ ಗಣೇಶ್, ಲತಾ ಮಲ್ಲಿಕಾರ್ಜುನ್, ಸಂಸದ ಈ.ತುಕಾರಾಂ ಸೇರಿ ಹಲವರು ಉಪಸ್ಥಿತರಿದ್ದರು.