Home ತಾಜಾ ಸುದ್ದಿ ನಾಪತ್ತೆಯಾಗಿದ್ದ ಸುಗರೆ ಪತ್ತೆ

ನಾಪತ್ತೆಯಾಗಿದ್ದ ಸುಗರೆ ಪತ್ತೆ

0
77

ಬಸವಕಲ್ಯಾಣ (ಬೀದರ್ ಜಿಲ್ಲೆ) : ಕಳೆದೆರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಸಂಜು ಕುಮಾರ್ ಸುಗರೆ ಪತ್ತೆಯಾಗಿದ್ದಾರೆ.
ಹೈದರಾಬಾದ್‌ನ ನಾಮಪಲ್ಲಿಯಲ್ಲಿರುವ ಬಗ್ಗೆ ಪತ್ತೆ ಹಚ್ಚಿದ ಅಲ್ಲಿಯ ಪೊಲೀಸರು ಬಸವಕಲ್ಯಾಣ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಸುಗರೆಯವರನ್ನು ವಶಕ್ಕೆ ಪಡೆದು ಮಂಗಳವಾರ ನಸುಕಿನ ಜಾವ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.