ನಾಪತ್ತೆಯಾಗಿದ್ದ ಪ್ರವಾಸಿಯ ಮೃತದೇಹ ಪತ್ತೆ

0
26

ಗೋಕರ್ಣ: ಬುಧವಾರ ಇಲ್ಲಿನ ದುಬ್ಬನಸಶಿ (ಭಾವಿಕೊಡ್ಲ)ಬಳಿ ಸಮುದ್ರದಲ್ಲಿ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ ಕೋಲಾರ ಶ್ರೀನಿವಾಸಪುರದ ವಿನಯ ಎಸ್.ವಿ.(೨೨) ಎನ್ನುವ ಪ್ರವಾಸಿಗನ ಮೃತದೇಹ ಶುಕ್ರವಾರ ಮುಂಜಾನೆ ಇಲ್ಲಿ ಮಿಡ್ಲ ಕಡಲತೀರದಲ್ಲಿ ದೊರೆತಿದೆ.
ಬೆಂಗಳೂರಿನಲ್ಲಿ ಫಾರ್ಮಸಿ ಓದುತ್ತಿರುವ ಒಟ್ಟು ೪೮ ವಿದ್ಯಾರ್ಥಿಗಳು ಬುಧವಾರ ಇಲ್ಲಿಗೆ ಪ್ರವಾಸಕ್ಕೆ ಬಂದಿದೆ. ಕಡಲಲ್ಲಿ ಮೋಜು ಮಸ್ತಿ ಮಾಡಲು ತೆರಳಿದ ವೇಳೆ ಅವಘಡ ನಡೆದಿತ್ತು. ಐವರು ವಿದ್ಯಾರ್ಥಿಗಳನ್ನು ಸ್ಥಳೀಯರು ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯವರು ರಕ್ಷಿಸಿದ್ದರು. ಓರ್ವ ನಾಪತ್ತೆಯಾಗಿದ್ದ, ಎರಡು ದಿನದ ಬಳಿಕ ಶವವಾಗಿ ದೊರೆತಿದ್ದು, ಮೃತದೇಹವನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

Previous articleರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಾಲ್ಕು ಬ್ಲಾಕ್ ಸ್ಪಾಟ್‌ ವೀಕ್ಷಿಸಿದ ಡಾ. ಸಿ ಎನ್ ಮಂಜುನಾಥ್
Next articleಸಣ್ಣ, ಆಕಸ್ಮಿಕ ಘಟನೆ ಎಂದ ಗೃಹ ಸಚಿವರಿಗೆ ಎಚ್‌ಡಿಕೆ ತರಾಟೆ