ನಾನು ಶಾಸಕನಾಗುವ ಮುನ್ನವೇ ಎರಡು ಕಡೆ ಅಭ್ಯರ್ಥಿ ಗೆಲ್ಲಿಸಿದೆ

0
27

ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಹೇಳಿದ ಹಾಗೆ ನಾನು ರಾಜಕೀಯದಲ್ಲಿ ಅಂಬೇಗಾಲ ಇಡ್ತಿದ್ದೇನೆ. ಅದು ಸತ್ಯ. ಆದರೆ ನಾನು ಶಾಸಕನಾಗುವ ಮುನ್ನವೇ ಕೆ.ಆರ್.ಪೇಟೆ, ಸಿರಾ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನನ್ನ ಶಕ್ತಿ ತೋರಿಸಿರುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಸಂಡೂರು ಕ್ಷೇತ್ರದ ತೋರಣಗಲ್ ನಲ್ಲಿ ರೋಡ್ ಶೋ ಗೂ‌ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು‌. ಸನ್ಮಾನ್ಯ ಯಡಿಯೂರಪ್ಪ ಅವರು ಪ್ರತನಿಧಿಸಿದ ಕ್ಷೇತ್ರದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಶಾಸಕನಾಗೋ ಮುಂಚೆ, ಮಂಡ್ಯಕ್ಕೆ ಸಿಎಂ ಬಂದಿದ್ರು, ಅವರು ಪ್ರಚಾರ ಮಾಡಿದ್ರು. KR ಪೇಟೆ ನಾವು ಗೆದ್ವಿ, ಶೀರಾದಲ್ಲಿ ಕೂಡ ನಾವು ಗೆದ್ದಿದ್ದೇವೆ
ಅದರಂತೆಯೇ ಸಂಡೂರು ಪಟ್ಟಣ ಕೂಡ ಗೆಲ್ತೆವೆ. ಸಂಡೂರು ವಿಧಾನ ಸಭೆ ಗೆದ್ದು ತೋರಿಸ್ತೇವೆ. ಮೂರು ಕ್ಷೇತ್ರದಲ್ಲಿ NDA ಅಭ್ಯರ್ಥಿಗಳು ನಾವು ಗೆಲ್ತೆವೆ. ಮೂರು ಕ್ಷೇತ್ರದಲ್ಲಿ ಗೆದ್ರೆ, ಅದು ವಿಜಯೇಂದ್ರ ಗೆಲುವಲ್ಲಾ, ಕಾರ್ಯಕರ್ತರ ಗೆಲುವು. ಭಂಡ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡ್ತಿದ್ದೇವೆ. ಭ್ರಷ್ಟ ಸಿಎಂ ವಿರುದ್ಧವೂ ನಾವು ಹೋರಾಟ ಮಾಡ್ತಿದ್ದೇವೆ ಎಂದು ಹೇಳಿದರು.

Previous articleಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ: ದೂರು ದಾಖಲು
Next articleಮಹಿಳೆ ಮೇಲೆ ಹರಿದ ಕಂಟೇನರ್