ಕಲಬುರಗಿ: ನಗರದಲ್ಲಿ ಇಡಿ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಮಂಗಳಮುಖಿಯನ್ನು ಮಂಗಳಮುಖಿಯರೆ ಬೆತ್ತಲೆ ಮಾಡಿ ಥಳಿಸಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲಬುರಗಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಅಂಕಿತಾ ಹಲ್ಲೆಗೆ ಒಳಗಾದ ಮಂಗಳಮುಖಿಯಾಗಿದ್ದಾರೆ. ಹಲ್ಲೆ ಬಳಿಕ ಮಂಗಳಮುಖಿಯ ಕೇಶ ಮುಂಡನೆ ಮಾಡಲಾಗಿದೆ. ಭೀಕ್ಷಾಟನೆ ಮಾಡಿದ ಹಣದಲ್ಲಿ ಪಾಲು ಕೊಡದಿದಕ್ಕೆ ಶೀಲಾ,ಮಾಲಾ,ಭವಾನಿ ಸೇರಿ ಆರು ಜನ ಮಂಗಳಮುಖಿಯರಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಂಗಳಮುಖಿಯರು ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೆ ಒಳಗಾದ ಮಂಗಳಮುಖಿಯನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಶೋಕ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.