ನಾಗಯ್ಯಸ್ವಾಮಿ ಕುಟುಂಬವರ್ಗದರಿಗೆ ಸಚಿವ ಖರ್ಗೆ ಸಾಂತ್ವನ

0
33

ಚಿತ್ತಾಪುರ: ಅನಾರೋಗ್ಯದಿಂದ ಮೊನ್ನೆ ನಿಧನರಾದ ಹಿರಿಯ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರ ಕುಟುಂಬದವರನ್ನು ಅಲ್ಲೂರು ಗ್ರಾಮದ ಮನೆಯಲ್ಲಿ ಭೇಟಿ ಮಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಂತ್ವನ ಹೇಳಿದರು.

ನಾಗಯ್ಯಸ್ವಾಮಿ ಅವರ ಸಹೋದರ, ಅವರ ಪುತ್ರಿ ಹಾಗೂ ಪುತ್ರನನ್ನು ಜತೆ ಮಾತನಾಡಿದ ಸಚಿವರು ಸಾಂತ್ವನ ತಿಳಿಸಿ ಅವರ ವಿಧ್ಯಾಭ್ಯಾಸ ದ ಬಗ್ಗೆ ವಿಚಾರಿಸಿದರು.

ಹಿರಿಯ ಪತ್ರಕರ್ತರಾಗಿದ್ದ ನಾಗಯ್ಯಸ್ವಾಮಿ ಅವರು ಪತ್ರಿಕೋದ್ಯಮ ವೃತ್ತಿಯ ಜೊತೆಗೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅವರ ನಿಧನದಿಂದಾಗಿ ಪತ್ರಕೋದ್ಯಮ ಕ್ಷೇತ್ರ ಓರ್ವ ಹಿರಿಯ ಮಾರ್ಗದರ್ಶಿ, ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರನ್ನು ಕಳೆದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ನಾಗರೆಡ್ಡಿಗೌಡ ಕಲದಾಳ, ಶಿವಾನಂದ ಪಾಟೀಲ ಮರ್ತೂರು, ರಮೇಶ ಮರಗೋಳ, ಶಿವರುದ್ರ ಭೇಣಿ, ಜಗನಗೌಡ ರಾಮತೀರ್ಥ, ರಾಮಲಿಂಗ ಹೊನಿಗೇರಿ, ರಾಮಣ್ಣ ನಾಟೀಕಾರ್, ಮಹಾದೇವ ಬೋನಿ ಸೇರಿದಂತೆ ಹಲವರಿದ್ದರು.

Previous articleಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಕಲ ಸಿದ್ಧತೆ
Next articleವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಅತಿಥಿ ಶಿಕ್ಷಕನ ಬಂಧನ