ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ

0
16

ಮಂಗಳೂರು: ನವರಾತ್ರಿ ವೇಷದ ರೂಪದಲ್ಲಿ ರೇಣುಕಾಸ್ವಾಮಿ ಪ್ರೇತಾತ್ಮ ಬಂದಿರುವುದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯಮನ ಜೊತೆ ಭೂಲೋಕಕ್ಕೆ ಬಂದ ಪ್ರೇತಾತ್ಮ, ಭೂಲೋಕದಲ್ಲಿ ತನಗೆ ಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಂತೆ ಚಿತ್ರಣ ಮಾಡಲಾಗಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ನವರಾತ್ರಿ ಸಂದರ್ಭ ವಿವಿಧ ವೇಷ ಹಾಕಿ ವೇಷಧಾರಿಗಳು ಮನೋರಂಜನೆ ನೀಡುತ್ತಾರೆ. ಈ ಬಾರಿ ವ್ಯಕ್ತಿಗಳಿಬ್ಬರು ರೇಣುಕಾಸ್ವಾಮಿ ಪ್ರೇತಾತ್ಮ ಹಾಗೂ ಯಮನ ವೇಷ ಧಾರಣೆ ಮಾಡಿ ಬಂದಿದ್ದಾರೆ.
ಅಂದಹಾಗೆ, ವಿಡಿಯೋದಲ್ಲಿರುವ ಧ್ವನಿ ತುಳು ಭಾಷೆಯಲ್ಲಿದೆ. ಚಿತ್ರಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಿದ್ದೇವೆ ಎಂಬ ಅರ್ಥ ಬರುವಂತೆ ತುಳು ಭಾಷೆಯಲ್ಲಿ ವೇಷಧಾರಿಗಳು ಮಾತನಾಡಿಕೊಂಡಿದ್ದಾರೆ. ಹೊಸ ಪರಿಕಲ್ಪನೆಯ ನವರಾತ್ರಿ ವೇಷದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

Previous articleಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದ ಸರ್ಕಾರ
Next article‘ಮಂಗಳೂರು ದಸರಾ’ ಮಹೋತ್ಸವ ಸಂಪನ್ನ ಮಳೆ ನಡುವೆಯೂ ಕುಗ್ಗದ ಉತ್ಸಾಹ