ಉಪವಾಸ ಬಿಡಬೇಕಾದರೆ ಇವರು ರಜೆ ಹಾಕಿ ಮನೆಗೆ ತೆರಳಬೇಕು
ಬೆಂಗಳೂರು: ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳು ಸಹ ದುರ್ಗಾ ಮಾತೆಯ ಆರಾಧನೆಗಾಗಿ ಹಿಂದೂ ಸರ್ಕಾರಿ ನೌಕರರಿಗೆ ವಿಶೇಷ ರಿಯಾಯಿತಿ ನೀಡಿ ಸಂಜೆ ಬೇಗ ಮನೆಗೆ ಹೋಗಲು ಅನುಮತಿ ನೀಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ 2 ಗಂಟೆ ರಜೆ ಕೋರಿರುವ ಕುರಿತು ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮುಸ್ಲಿಂ ಸರ್ಕಾರೀ ನೌಕರರಿಗೆ ರಂಜಾನ್ ಸಮಯದಲ್ಲಿ ಉಪವಾಸ ಬಿಡಲು ಅನುಮತಿ ನೀಡುವಂತೆ ಕೆಲ ಮುಸಲ್ಮಾನ ನಾಯಕರು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಉಪವಾಸ ಬಿಡಬೇಕಾದರೆ ಇವರು ರಜೆ ಹಾಕಿ ಮನೆಗೆ ತೆರಳಬೇಕು ವಿನಃ ಸರ್ಕಾರ ಇವರ ಮನವಿಯನ್ನು ಪುರಸ್ಕರಿಸಬಾರದು. ಒಂದು ವೇಳೆ ಪುರಸ್ಕರಿಸಿದರೆ, ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳು ಸಹ ದುರ್ಗಾ ಮಾತೆಯ ಆರಾಧನೆಗಾಗಿ ಹಿಂದೂ ಸರ್ಕಾರಿ ನೌಕರರಿಗೆ ವಿಶೇಷ ರಿಯಾಯಿತಿ ನೀಡಿ ಸಂಜೆ ಬೇಗ ಮನೆಗೆ ಹೋಗಲು ಅನುಮತಿ ನೀಡಬೇಕು, Secularism cannot be one-way Traffic ಎಂದು ಮುಖ್ಯ ಮಂತ್ರಿಗಳು ಅರ್ಥೈಸಿಕೊಳ್ಳಲಿ. ಸರ್ಕಾರದ ಅನುಮತಿಯಿಲ್ಲದೆ ಮುಸಲ್ಮಾನ ನೌಕರರು ಮನೆಗೆ ತೆರಳಿದರೆ ಅದನ್ನು ರಜೆ ಎಂದು ಪರಿಗಣಿಸಬೇಕೇ ಹೊರತು ‘ವಿಶೇಷ ಅನುಮತಿ ‘ ಎಂದು ಪರಿಗಣಿಸಬಾರದು ಎಂದಿದ್ದಾರೆ.