ಬೆಳಗಾವಿ; ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ನಿನ್ನೆಯಷ್ಟೆ ಹೆರಿಗೆಯಾಗಿ ಮಗು ಹೆತ್ತ ಬಾಣಂತಿ ಯಾರಿಗೂ ತಿಳಿಸದೆ ಮಗು ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಮಹಿಳೆಯನ್ನು ಬೈಲಹೊಂಗಲದ ನಿವಾಸಿ ಬೀಬಿಜಾನ್ ಸದ್ದಾಂಹುಸೇನ್ ಸಯ್ಯದ್ ಎಂದು ಗುರುತಿಸಲಾಗಿದೆ.
ಸದ್ಯ ಮಗು ದಾದಿಯರ ಆರೈಕೆಯಲ್ಲಿದ್ದು, ಆಸ್ಪತ್ರೆಯವರು ನೀಡಿದ ದೂರಿನಂತೆ ಎಪಿಎಂಸಿ ಠಾಣೆಯಲ್ಲಿ ಈ ಬಗ್ಗೆ ಬೀಬಿಜಾನ್ ಮೇಲೆ ಪ್ರಕರಣ ದಾಖಲಾಗಿದೆ.