ನಮ್ಮ ಯಾರದ್ದೂ ಒಪ್ಪಿಗೆ ಇಲ್ಲ, ಹೀಗೆ ಹೇಳಿದ್ದು ನೀವೇ ಅಲ್ಲವೇ…

0
19

ಬೆಂಗಳೂರು: ಕಾಂಗ್ರೆಸ್ ಒಡೆದು ಮುಖ್ಯಮಂತ್ರಿಯಾಗಲು ತಯಾರಿರುವವರು ನಿಮ್ಮವರಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.‌
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕಾಂಗ್ರೆಸ್ ಒಡೆದು ನಾನು ಮುಖ್ಯಮಂತ್ರಿಯಾಗಬೇಕು ಎಂದು ಸಾವಿರ ಕೋಟಿ ರಿಸರ್ವ್ ಮಾಡಿಟ್ಟಿದ್ದಾರೆ, ಆದರೆ ಕಾಂಗ್ರೆಸ್ ಒಡೆದು ತಗೋಳೋಕೆ ನಮ್ಮ ಯಾರದ್ದೂ ಒಪ್ಪಿಗೆ ಇಲ್ಲ, ಹೀಗೆ ಹೇಳಿದ್ದು ನೀವೇ ಅಲ್ಲವೇ
ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಕಾಂಗ್ರೆಸ್ ಒಡೆದು ಮುಖ್ಯಮಂತ್ರಿಯಾಗಲು ತಯಾರಿರುವವರು ನಿಮ್ಮವರಲ್ಲವೇ? ನಿಮ್ಮವರಲ್ಲದಿದ್ದರೆ ನಿಮ್ಮ “ಒಪ್ಪಿಗೆ” ಕೇಳುವವರು ಇನ್ಯಾರಿದ್ದಾರೆ ಸ್ವಾಮಿ! ಯತ್ನಾಳ್ ಸಾಹೇಬರೇ, ಸಿಎಂ ಹುದ್ದೆಗೆ 2,500 ಕೋಟಿ ಕೊಡಬೇಕು ಎಂದಿದ್ದು “ಫ್ಯಾಕ್ಟ್“ ಅಲ್ಲವೇ? ಕೋವಿಡ್ ಹಗರಣದಲ್ಲಿ 40,000 ಕೋಟಿ ಲೂಟಿಯಾಗಿದೆ ಎಂದಿದ್ದು ”ಫ್ಯಾಕ್ಟ್“ ಅಲ್ಲವೇ? ಹಿಂದೆ ಸ್ಪೆಷಲ್ ಫ್ಲೈಟ್ ನಲ್ಲಿ ಶಾಸಕರನ್ನು ಬಾಂಬೆಗೆ ಕಳಿಸಿದ್ದು ”ಫ್ಯಾಕ್ಟ್” ಅಲ್ಲವೇ? ವಿಜಯೇಂದ್ರರ ನಾಯಕತ್ವ ನಾವು ಒಪ್ಪುವುದಿಲ್ಲ ಎಂದಿದ್ದು “ಫ್ಯಾಕ್ಟ್“ ಅಲ್ಲವೇ? ಯತ್ನಾಳ್ ಅವರೇ, ರಾಜ್ಯದ ಜನತೆ ಫ್ಯಾಕ್ಟ್ ಚೆಕ್ ಮಾಡಿಯೇ ನಿಮ್ಮನ್ನು 66ಕ್ಕೆ ಇಳಿಸಿದ್ದಾರೆ, ನಮಗೆ 136 ಆಶೀರ್ವದಿಸಿದ್ದಾರೆ ಎಂದಿದ್ದಾರೆ.

Previous articleಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ
Next articleಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು