ನಮ್ಮಲ್ಲಿ ಯಾರ ಬದಲಾವಣೆಯೂ ಇಲ್ಲ: ವಿಜಯೇಂದ್ರ ಕ್ರೀಯಾಶೀಲ ಅಧ್ಯಕ್ಷ

0
50

ಸಿಎಂ ರಾಜೀನಾಮೆ ನೀಡಲಿ : ಛಲುವಾದಿ ಆಗ್ರಹ

ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದಿರುವ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ವಿಜಯೇಂದ್ರ ಅವರೊಬ್ಬ ಕ್ರೀಯಾಶೀಲ ಅಧ್ಯಕ್ಷರಾಗಿದ್ದಾರೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕನ ಬದಲಾವಣೆ ಸೇರಿದಂತೆಯೇ ಯಾರ ಬದಲಾವಣೆ ಇಲ್ಲ. ಈ ಬಗ್ಗೆ ಏನೇ ಇದ್ದರೂ ಪಕ್ಷದ ಹೈಕಮಾಂಡ ನೋಡಿಕೊಳ್ಳುತ್ತದೆ. ಪಕ್ಷದ ಸಂಘಟನೆ ವಿಚಾರವಾಗಿ ದೆಹಲಿಗೆ ರಾಜ್ಯಾಧ್ಯಕ್ಷರು ಹೋಗಿ ಬರುತ್ತಾರೆ. ಅದಕ್ಕೆ ಬೇರೆ ಕಲ್ಪನೆ ಕಟ್ಟುವುದು ಬೇಡ ಎಂದರು. ಇನ್ನೂ 2-3 ತಿಂಗಳಲ್ಲಿ ಭಾರಿ ಬದಲಾವಣೆ ಆಗಲಿದೆ ಎಂಬ ಸಚಿವ ರಾಜಣ್ಣ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ‌ ಮುಳುಗಿದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದರು.

Previous articleಕೆಲಸ ನಿರ್ವಹಿಸಿದ್ದ ಬ್ಯಾಂಕ್‌ನಲ್ಲೇ ನಿವೃತ್ತ ಉದ್ಯೋಗಿ ಆತ್ಮಹತ್ಯೆ
Next articleಬೆಂಕಿ ಹಚ್ಚಿ ತಾಯಿ ಕೊಂದ ಮಗ: ನೆರೆಮನೆ ಮಹಿಳೆಯೂ ಗಂಭೀರ