ನಟ ಶಿವರಾಜ್ ಕುಮಾರ್  ಭೇಟಿಯಾದ ಸಿಎಂ ಸಿದ್ದರಾಮಯ್ಯ

0
14

ಬೆಂಗಳೂರು:  ನಟ ಶಿವರಾಜ್ ಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಅಮೇರಿಕದಿಂದ ಕ್ಯಾನ್ಸರ್ ಚಿಕಿತ್ಸೆ ಬಳಿಕ ನಿನ್ನೆ ಬೆಂಗಳೂರಿಗೆ ಆಗಮಿಸಿರುವ ನಟ ಶಿವರಾಜಕುಮಾರ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.   ಡಿಸೇಂಬರ್ 2024ರ 18ರಂದು ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಶಿವರಾಜ್‌ಕುಮಾರ್ ಅವರಿಗೆ ಚಿಕಿತ್ಸೆ ಯಶಸ್ವಿಯಾಗಿ, ಚಿಕಿತ್ಸೆಯ ನಂತರವೂ ಕೆಲ ದಿನಗಳ ಕಾಲ ಅಮೆರಿಕಾದಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಶಿವಣ್ಣ ಹೆಚ್ಚು ಕಮ್ಮಿ ಒಂದು ತಿಂಗಳ ನಂತರ ಬೆಂಗಳೂರಿಗೆ ಮರಳಿ ಬಂದಿದ್ದಾರೆ.

Previous articleಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಇಡಿ ನೋಟಿಸ್​
Next articleಉಡುಪಿ ಶಾಲೆಗೆ ಬಾಂಬ್ ಬೆದರಿಕೆ