ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ಗೋವಿಂದ ನರೇಗಲ್
ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ | ಗೋವಿಂದ ನರೇಗಲ್ ಅವರು ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಿಧನರಾದರು.
ನಗರದ ಓರ್ವ ವೈದ್ಯರಾಗಿ, ಆರೆಸ್ಸೆಸ ನ ಹುಬ್ಬಳ್ಳಿ ಮಹಾನಗರ ಸಂಘಚಾಲಕರಾಗಿ, ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಧ್ಯಕ್ಷ ಸೇರಿದಂತೆ ಹತ್ತು ಹಲವು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ೯೦ ವರ್ಷದ ಇಳಿವಯಸ್ಸಿನಲ್ಲೂ ನಿತ್ಯ ಶಾಖೆಯ ಉಪಸ್ಥಿತಿಯ ಮೂಲಕ ಒಬ್ಬ ಆದರ್ಶ ಸ್ವಯಂಸೇವಕರಾಗಿದ್ದರು. ಹುಬ್ಬಳ್ಳಿಯಲ್ಲಿ ಒಂದು ಪೀಳಿಗೆಯ ಸಂಘದ ಸ್ವಯಂಸೇವಕರು ಇವರ ಮಾರ್ಗದರ್ಶನದಲ್ಲಿ ಬೆಳೆದರು. ಇವರ ಮಾತುಗಳಿಗೆ ಇಡೀ ನಗರದಲ್ಲಿ ಒಂದು ವಿಶೇಷ ತೂಕ ಇರುತ್ತಿತ್ತು. ಕೋಮುಗಲಭೆಯಿಂದ ಪೀಡಿತ ಅಂದಿನ ಹುಬ್ಬಳ್ಳಿ ನಗರದಲ್ಲಿ ಡಾ ನರೇಗಲ್ ಅವರ ಸಲಹೆ, ಮಾರ್ಗದರ್ಶನ ಎಲ್ಲ ಸಮಾಜ ಬಂಧುಗಳಿಗೆ, ಪೊಲೀಸರಿಗೆ ಸರ್ವಾನುಮತದಿಂದ ಮಾನ್ಯವಾಗುತ್ತಿತ್ತು. ಅಷ್ಟು ಪ್ರಬುದ್ಧ ಚಿಂತಕರಾಗಿದ್ದರು ಡಾ ಗೋವಿಂದ ನರೇಗಲ್.
ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ
ಸಿ ಟಿ ರವಿ ಸಂತಾಪ: ಹುಬ್ಬಳ್ಳಿಯ ಹಿರಿಯ ಸ್ವಯಂಸೇವಕ, ಹುಬ್ಬಳಿ ನಗರದ ಪೂರ್ವ ನಗರ ಸಂಘಚಾಲಕರಾದ ಡಾ| ಗೋವಿಂದ ನರೇಗಲ್ ಅವರ ನಿಧನ ದುಃಖ ತರಿಸಿದೆ. ಡಾಕ್ಟರ್ ತಮ್ಮ ಇಳಿ ವಯಸ್ಸಿನಲ್ಲೂ ಕೂಡ ಅತ್ಯಂತ ಉತ್ಸಾಹದಿಂದ ದೇಶ ಹಾಗೂ ಧರ್ಮದ ಸೇವೆಯಲ್ಲಿ ತೊಡಗಿದ್ದರು, ಅವರ ಅಗಲಿಕೆ ಹಿಂದೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಮೋಕ್ಷ ಕರುಣಿಸಿ, ಅವರ ಕುಟುಂಬ ಹಾಗೂ ಸಾವಿರಾರು ಕಾರ್ಯಕರ್ತರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ.
ಬಸವರಾಜ ಬೊಮ್ಮಾಯಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ | ಗೋವಿಂದ ನರೇಗಲ್ ಅವರು ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ದುಃಖವಾಗಿದೆ, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಕಾರ್ಯಕರ್ತರ ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಬಿ ವೈ ವಿಜಯೇಂದ್ರ: ನಮ್ಮೆಲ್ಲರ ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಬ್ಬಳ್ಳಿಯ ಮಾಜಿ ಸಂಘಚಾಲಕರಾದ ಡಾ. ಗೋವಿಂದ ನರೇಗಲ್ಲ ಅವರು ಇಂದು ಮುಂಜಾನೆ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.