ನಕಲಿ ನೋಟಿನ ಆರೋಪಿ ಒಂದು ವಾರ ಕಸ್ಟಡಿಗೆ

0
44

ದಾಂಡೇಲಿ: ದಾಂಡೇಲಿಯ ಗಾಂಧಿನಗರದ ಮನೆಯೊಂದರಲ್ಲಿ ಸಿಕ್ಕ ನಕಲಿ ನೋಟಿನ ಆರೋಪಿ ಅರ್ಷದ್ ಅಜುಂ ಖಾನ್‌ನನ್ನು ಶನಿವಾರ ನಗರ ಪೊಲೀಸ್ ಠಾಣೆಯ ಪೋಲಿಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ನಕಲಿ ನೋಟುಗಳ ಮೂಲ ಹೇಳುತ್ತಿಲ್ಲ ಆತ ಇನ್‌ವೈಸ್ ನೀಡಿದ್ದು ಅದರಲ್ಲಿ ಕೊಟ್ಟಿರುವ ಜಿಎಸ್‌ಟಿ ನಂಬರ್ ಸುಳ್ಳಾಗಿರುತ್ತದೆ. ಆರೋಪಿಯ ಆಧಾರ್ ಕಾರ್ಡ್ ವಿಳಾಸ ಲಖನೌದಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಧೀಶರು ಬುಧವಾರದವೆರೆಗೆ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿ ಆದೇಶಿಸಿದ್ದಾರೆ.

Previous articleಜನಿವಾರ ಕಳಚಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರ್ಕಾರ ಬದ್ಧ
Next articleಜಾತಿಜನಗಣತಿ ಒಪ್ಪಲಾಗುವುದಿಲ್ಲ