ಧಾರವಾಡ: ಹೊಸ ವರ್ಷಕ್ಕೆ ಧಾರವಾಡದ ಜನತೆಗೆ ಪ್ರತ್ಯೇಕ ಪಾಲಿಕೆ ಘೋಷಣೆಯ ಮೂಲಕ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರಕಾರ ಮಂಗಳವಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಮೂಲಕ ಧಾರವಾಡ ಮಹಾನಗರ ಪಾಲಿಕೆಯ ಗಡಿಯನ್ನು ಅಧಿಕೃತವಾಗಿ ಘೋಷಿಸಿದೆ.
ಕಳೆದ ಜ. ೨ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಸರಕಾರ ಧಾರವಾಡ ನಗರದ ಆದಾಯ, ಜನರ ಬೇಡಿಕೆಯನ್ನು ಪರಿಗಣಿಸಿ ಹುಬ್ಬಳ್ಳಿ-ಧಾರವಾಡ ಒಂದೇ ಆಗಿದ್ದ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸಿ ಧಾರವಾಡ ಮಹಾನಗರ ಪಾಲಿಕೆ ಮಾಡುವುದಾಗಿ ಘೋಷಣೆ ಮಾಡಿತ್ತು.
ಅದರ ಮುಂದಿನ ಭಾಗವಾಗಿ ಆಕ್ಷೇಪಣೆಗಳನ್ನು ಸ್ವೀಕರಿಸಿದ್ದ ರಾಜ್ಯ ಸರಕಾರ ಬುಧವಾರ ಧಾರವಾಡ ಮಹಾನಗರ ಪಾಲಿಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಹೊಸ ಮಹಾನಗರ ಪಾಲಿಕೆಯ ಸರಹದ್ದು ಎಲ್ಲಿಂದ ಎಲ್ಲಿಯ ವರೆಗೆ ಇರಲಿದೆ ಎನ್ನುವುದನ್ನು ಅಧೀಕೃತವಾಗಿಯೇ ಪ್ರಕಟಿಸಿದೆ.
ಪಾಲಿಕೆ ವ್ಯಾಪ್ತಿ ಎಲ್ಲಿಯವರೆಗೆ…?
ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ೧ರಿಂದ ೨೬ ವಾರ್ಡ್‌ಗೆ ೧೨೦.೯೪ ಚದರ ಕಿ.ಮೀ ಬರಲಿದ್ದು, ಉತ್ತರ ದಿಕ್ಕಿನಲ್ಲಿ ಸವದತ್ತಿ ರಸ್ತೆಯ ಓ ಬಿಂದುವಿನಿಂದ ಆರಂಭವಾಗಿ ಕಮಲಾಪೂರ ಗ್ರಾಮದ ಗಡಿಗುಂಟ ಪಶ್ಚಿಮಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೪ರ ಗಡಿಗುಂಟ ಉಪ್ಪಿನ ಬೆಟಗೇರಿ ರಸ್ತೆಯ ಪಶ್ಚಿಮ ಬಿಂದು ಬಿಗೆ ಸಂಧಿಸುತ್ತ ಮುಂದೆ ಉತ್ತರಾಭಿಮುಖವಾಗಿ ಚಲಿಸುತ್ತ ಪಶ್ಚಿಮದಲ್ಲಿ ಸಂಧಿಸುತ್ತದೆ.
ಪಶ್ಚಿಮಾಭಿಮುಖವಾಗಿ ಚಲಿಸುತ್ತ ಯತ್ತಿನಗುಡ್ಡ ರಸ್ತೆಯ ವಾರ್ಡ್ ೪ರ ಸರಹದ್ದಿನಗುಂಟ ಚಲಿಸುತ್ತ ಪಶ್ಚಿಮಾಭಿಮುಖವಾಗಿ ವಾರ್ಡ್ ನಂ. ೨ ಸರಹದ್ದಿಗೆ ಸಂಧಿಸುತ್ತದೆ. ಮುಂದೆ ಉತ್ತರಾಬಿಮುಖವಾಗಿ ಚಲಿಸುತ್ತ ವಾರ್ಡ್ ೨ ಸರಹದ್ದಿನ ಪಶ್ಚಿಮದ ಮೂಲೆಯಲ್ಲಿ ಸಂಧಿಸುತ್ತದೆ.
ಪಶ್ಚಿಮಾಬಿಮುಖವಾಗಿ ಚಲಿಸುತ್ತ ವಾರ್ಡ್ ೨ರ ನರೇಂದ್ರ(ಕೆಇಬಿ ಸಬ್ ಸ್ಟೇಷನ್) ರಸ್ತೆಯನ್ನು ಸಂಧಿಸುತ್ತದೆ. ಮುಂದೆ ಪೂರ್ವಾಭಿಮುಖವಾಗಿ ನರೇಂದ್ರ ರಸ್ತೆಯ ಮುಖಾಂತರ ಚಲಿಸುತ್ತ ಸಾಧುನವರ ಎಸ್ಟೇಟ್‌ನ ಪಶ್ಚಿಮ ಮೂಲೆಯಲ್ಲಿ ಸಂಧಿಸುತ್ತದೆ. ಪಶ್ಚಿಮಾಬಿಮುಖವಾಗಿ ಚಲಿಸುತ್ತ ವಾರ್ಡ್ ೧ರ ಸರಹದ್ದಿನ ಮುಖಾಂತರ ವಾಡರ್ಡ್ ನಂ. ೧೦ರ ಸರಹದ್ದಿನಲ್ಲಿ ಸಂಧಿಸುತ್ತದೆ. ಮುಂದೆ ಪಶ್ಚಿಮಾಭಿಮುಖವಾಗಿ ಚಲಿಸುತ್ತ ವಾರ್ಡ್ ೧೦ರ ಸರಹದ್ದಿನಗುಂಟ ಶಿವಶಕ್ತಿ ನಗರ ಮುಖಾಂತರ ಅಳ್ನಾವರ ರಸ್ತೆಯನ್ನು ಸಂಧಿಸುತ್ತದೆ.
ಮುಂದೆ ದಕ್ಷಿಣಾಭಿಮುಖವಾಗಿ ವಾರ್ಡ್ ನಂ. ೧೦ರ ಸರಹದ್ದಿನಗುಂಟ ಚಲಿಸುತ್ತ ವಾರ್ಡ್ ನಂ. ೧೮ರ ಬಿಂದುವಿನಲ್ಲಿ(ಬೈಪಾಸ್ ರಸ್ತೆ) ಸಂದಿಸುತ್ತದೆ. ಅಲ್ಲಿಂದ ಮುಂದೆ ದಕ್ಷಿಣಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೧೮ರ ಸರಹದ್ದಿನಗುಂಟ ಚಲಿಸುತ್ತ ಮನಸೂರ ರಸ್ತೆಯಲ್ಲಿ ಸಂಧಿಸುತ್ತದೆ.
ಮುಂದೆ ವಾರ್ಡ್ ನಂ. ೧೦ರ ಗಡಿಗುಂಟ ಪೂರ್ವಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೨೦ರ ಸರಹದ್ದಿನ ಮೂಲೆಯಲ್ಲಿ(ಬೈಪಾಸ್) ಸಂಧಿಸುತ್ತದೆ. ಪೂರ್ವಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೨೦ರ ಸರಹದ್ದಿನ ಗಡಿಗುಂಟ ವಾಡ್ ನಂ. ೨೬ರ ಗಡಿಯನ್ನು ಸಂಧಿಸುತ್ತದೆ. ದಕ್ಷಿಣಾಭಿಮುಖವಾಗಿ ವಾರ್ಡ್ ನಂ. ೨೬ರ ಗಡಿ ಮುಖಾಂತರ ಚಲಿಸುತ್ತ(ಕರ್ನಾಟಕ ವಾಟರ್ ಪ್ಯೂರಿಪಿಕೇಷನ್ ಬೋರ್ಡ್) ದೇವರಲಿಂಗನಕೊಪ್ಪ ರಸ್ತೆಗೆ ಸಂಧಿಸುತ್ತದೆ. ಉತ್ತರಾಬಿಮುಖವಾಗಿ ವಾರ್ಡ್ ನಂ. ೨೭ರ ಗಡಿಗುಂಟ ಚಲಿಸುತ್ತ ಸುತಗಟ್ಟಿ ರಸ್ತೆಗೆ ಸಂಧಿಸುತ್ತದೆ. ಪೂವಾಭಿಮುಖವಾಗಿ ಚಲಿಸುತ್ತ ಪಿ.ಬಿ. ರಸ್ತೆಯ ವಾರ್ಡ್ ನಂ. ೨೯ ಗಡಿಯಲ್ಲಿ ಸಂಧಿಸುತ್ತದೆ. ಉತ್ತರಾಬಿಮುಖವಾಗಿ ವಾರ್ಡ್ ನಂ. ೨೯ರ ಗಡಿಗುಂಟ ಚಲಿಸುತ್ತ ಮುಂದೆ ನವಲೂರ ರಸ್ತೆಗೆ ಸಂಧಿಸುತ್ತದೆ.
ಪಶ್ಚಿಮಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೨೪ ಗಡಿಗುಂಟ ರಾಯಾಪೂರ ರಸ್ತೆಯನ್ನು ದಾಟಿ ಉತ್ತರಾಬಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೨೩ರ ಗಡಿಗೆ ಸಂಧಿಸುತ್ತದೆ. ಉತ್ತರಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೨೩ರ ಗಡಿಗುಂಟ ಚಲಿಸಿ ವಾರ್ಡ್ ನಂ. ೮ರ ಗಡಿಗೆ ಸಂಧಿಸುತ್ತದೆ. ವಾರ್ಡ್ ೮ರ ಗಡಿಗುಂಟ ಪೂವಾಭಿಮುಖವಾಗಿ ಚಲಿಸುತ್ತ ಗೋವನಕೊಪ್ಪ ಗಡಿಗೆ ಸಂಧಿಸುತ್ತ ಅಲ್ಲಿಂದ ಮುಂದೆ ಉತ್ತರಾಭಿಮುಖವಾಗಿ ಚಲಿಸುತ್ತ ಬ್ಯಾಹಟ್ಟಿ ಹಾಗೂ ಗೋವನಕೊಪ್ಪ ರಸ್ತೆಯನ್ನು ದಾಟಿ ವಾರ್ಡ್ ನಂ. ೭ ಉತ್ತರದ ಮೂಲೆಯಲ್ಲಿ ಸಂಧಿಸುತ್ತದೆ.
ಪಶ್ಚಿಮಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೫ರ ಗಡಿರೇಖೆಗೆ ಸಂಧಿಸುತ್ತದೆ. ಪೂರ್ವಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೫ರ ದಕ್ಷಿಣದ ಮೂಲೆಯಲ್ಲಿ ಸಂಧಿಸುತ್ತದೆ. ಉತ್ತರಾಭಿಮುಖವಾಗಿ ಚಲಿಸುತ್ತ ಕವಲಗೇರಿ ರಸ್ತೆಯನ್ನು ದಾಟಿ ಪೂರ್ವಾಭಿಮುಖವಾಗಿ ಕವಲಗೇರಿ ಗ್ರಾಮದ ಗಡಿಯ ದಕ್ಷಿಣ ಮೂಲೆಯಲ್ಲಿ ಸಂಧಿಸುತ್ತದೆ. ಉತ್ತರಾಭಿಮುಖವಾಗಿ ಚಲಿಸುತ್ತ ವಾರ್ಡ್ ನಂ. ೫ರ ಗಡಿಗುಂಟ ಅಮ್ಮಿನಭಾವಿ ಗ್ರಾಮದ ಗಡಿಯ ಪೂರ್ವದ ಮೂಲೆಯಲ್ಲಿ ಸಂಧಿಸುತ್ತದೆ. ಪಶ್ಚಿಮಾಭಿಮುಖವಾಗಿ ಚಲಿಸುತ್ತ ಅಮ್ಮಿನಭಾವಿ ಗಡಿಯ ಪಶ್ಚಿಮದ ಮೂಲೆಯಲ್ಲಿ ಸಂಧಿಸುತ್ತದೆ. ದಕ್ಷಿಣಾಭಿಮುಖವಾಗಿ ಚಲಿಸುತ್ತ ಕವಲಗೇರಿ ರಸ್ತೆಗೆ ಸಂಧಿಸಿ ಮುಂದೆ ಪಶ್ಚಿಮಾಭಿಮುಖವಾಗಿ ವಾರ್ಡ್ ನಂ. ೫ರ ಗಡಿ ಮುಖಾಂತರ ಸವದತ್ತಿ ರಸ್ತೆಯ ಓ ಬಿಂಧುವಿನಲ್ಲಿ ವಿಲೀನವಾಗುತ್ತದೆ.