ಧಾರವಾಡ : ಧಾರವಾಡದ Nidec Industrial Automation India Private Limited ನ ನೂತನ ಘಟಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಉದ್ಘಾಟಿಸಿದ್ದಾರೆ.
ಈ ಘಟಕದಲ್ಲಿ ಫ್ರೆಂಚ್ ಮತ್ತು ಜಪಾನೀ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಡೇಟಾ ಸೆಂಟರ್ ಉದ್ಯಮಗಳ ಅಗತ್ಯಗಳಿಗೆ ತಕ್ಕಂತೆ 2 ಮೆಗಾವಾಟ್, 3 ಮತ್ತು 4 ಮೆಗಾವಾಟ್ ಸಾಮರ್ಥ್ಯದ ಹೆವಿ ಡ್ಯೂಟಿ ಮಶೀನ್ ಗಳ ಉತ್ಪಾದಿಸುವರು. ಇವುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಯುರೋಪ್ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಪ್ರಸ್ತುತ ಘಟಕದಲ್ಲಿ ಸುಮಾರು 800 ಉದ್ಯೋಗಿಗಳಿದ್ದು, ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಗೆ ಬರುತ್ತಿದ್ದಂತೆ ಈ ಸಂಖ್ಯೆಯನ್ನು 3,000ಕ್ಕೆ ವಿಸ್ತರಿಸುವ ಗುರಿಯನ್ನು #Nidec ಹೊಂದಿದ್ದು, ನೈಡೆಕ್ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿರುವುದರ ಜೊತೆಗೆ ಈ ಭಾಗದಲ್ಲಿನ ಆರ್ಥಿಕ ಪ್ರಗತಿಗೆ ಕಾರಣವೂ ಆಗುತ್ತಿದೆ. ಸಂಸ್ಥೆಯ ಯಶೋಗಾಥೆ ಇದೇ ರೀತಿ ಮುಂದುವರಿಯಲಿ ಎಂದಿದ್ದಾರೆ.