ಧಾರವಾಡ ಜಿಲ್ಲೆಯಲ್ಲಿ ಮೂರು ಚಿರತೆಗಳು ಪ್ರತ್ಯಕ್ಷ

0
21

ಧಾರವಾಡ: ಧಾರವಾಡ ಜಿಲ್ಲೆಯ ಗಡಿ ಗ್ರಾಮಗಳಾದ ಗುಳೇದಕೊಪ್ಪ ಹಾಗೂ ಮದಿಕೊಪ್ಪ ಗ್ರಾಮಗಳ ಮಧ್ಯೆ ಮೂರು ಚಿರತೆಗಳು ರೈತರ ಕಣ್ಣಿಗೆ ಬಿದ್ದಿವೆ.

ಹಳೆತೇಗೂರು, ಗುಳೇದಕೊಪ್ಪ, ಮದಿಕೊಪ್ಪ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವುದನ್ನು ಗ್ರಾಮಸ್ಥರೇ ಖಾತ್ರಿಪಡಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಗುಳೇದಕೊಪ್ಪ ಪಂಚಾಯ್ತಿ ವತಿಯಿಂದ ಸುತ್ತ ಮುತ್ತಲಿನ ಗ್ರಾಮದಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಡಂಗುರ ಸಾರಲಾಗಿದೆ.

ಚಿರತೆಗಳು ಓಡಾಡುವ ದೃಶ್ಯವನ್ನು ಗ್ರಾಮಸ್ಥರೇ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

Previous articleಮಹತ್ವದ ಗ್ಯಾರಂಟಿ ಘೋಷಿಸಿದ ʼಇಂಡಿಯಾʼ
Next articleರಾಕ್ ಲೈನ್ ಮಾಲ್‌ಗೆ ಬೀಗ ಜಡಿದ ಅಧಿಕಾರಿಗಳು