ಧಾನ್ಯಗಳ ನಷ್ಟದ ಪ್ರಮಾಣ ಕಡಿಮೆಯಾಗಿದೆ

0
48

ಈಗ ಮುಕ್ತ ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ.

ನವದೆಹಲಿ: ವೈಜ್ಞಾನಿಕ ಶೇಖರಣಾ ಪದ್ಧತಿಗಳಿಂದ ಧಾನ್ಯಗಳ ನಷ್ಟದ ಪ್ರಮಾಣವೂ ಕಡಿಮೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು ವೈಜ್ಞಾನಿಕ ಶೇಖರಣಾ ಪದ್ಧತಿಗಳ ಪ್ರಕಾರ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಫ್ಯೂಮಿಗೇಷನ್, ಕವರ್‌ಗಳು, ನೈಲಾನ್ ಹಗ್ಗಗಳು, ಕೀಟನಾಶಕಗಳನ್ನು ಒದಗಿಸಲಾಗುತ್ತದೆ. ಈಗ ಮುಕ್ತ ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಗ್ರಹ ಮತ್ತು ಸಾಗಣೆಯಲ್ಲಾಗುವ ಧಾನ್ಯಗಳ ನಷ್ಟದ ಪ್ರಮಾಣವೂ ಕಡಿಮೆಯಾಗಿದೆ. 2014 ರಲ್ಲಿ ಒಟ್ಟು 0.39% ಅಕ್ಕಿ ನಷ್ಟವಾಗಿತ್ತು, ಪ್ರಸ್ತುತ 0.07% ಇಳಿದಿದೆ. ಗೋಧಿ ಸಾಗಣೆ ನಷ್ಟವು 2013 ರಲ್ಲಿ 0.35% ರಿಂದ ಈಗ 0.14% ಕ್ಕೆ ಇಳಿದಿದೆ ಎಂದರು.

Previous articleವಯನಾಡ್ ಭೂಕುಸಿತ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರಾಹುಲ್‌ ಮನವಿ
Next articleಇಂದಿನಿಂದ ಫಲಪುಷ್ಪ ಪ್ರದರ್ಶನ