ದ್ವಿತೀಯ ಪಿಯು ಫಲಿತಾಂಶ: ಶೇ. 73.45 ವಿದ್ಯಾರ್ಥಿಗಳು ಪಾಸ್‌

0
23

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ 1ನೇ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 73.45 ತೇರ್ಗಡೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉಡುಪಿ ಜಿಲ್ಲೆ 93.90 ಪ್ರತಿಶತದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ಎರಡನೇ ಸ್ಥಾನ ಪಡೆದಿದ್ದು, ಶೇ 93.57 ಫಲಿತಾಂಶ ಸಾಧಿಸಿದೆ. ಇನ್ನು ಶೇ 48.45 ಫಲಿತಾಂಶ ಪಡೆದಿರುವ ಯಾದಗಿರಿ ಕೊನೆಯ ಸ್ಥಾನ ಪಡೆದಿದೆ ಎಂದರು.
ಈ ಬಾರಿ ಸರ್ಕಾರಿ ಶಾಲೆಯ ಶೇ 57 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಅನುದಾನ ಕಾಲೇಜುಗಳಲ್ಲಿ ಶೇ 67, ಅನುದಾನರಹಿತ ಕಾಲೇಜುಗಳಲ್ಲಿ ಶೇ 82 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.

Previous articleಶಿವಮೊಗ್ಗ: 8 ಕಡೆ ಇಡಿ ದಾಳಿ
Next articleಪಿಯು ಫಲಿತಾಂಶ: ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌