ದೇಶ ಮುಖ್ಯ ಅನ್ನೋರು ಬಿಜೆಪಿಗೆ ಬರಬೇಕು..

0
20

ಬಳ್ಳಾರಿ: ಲಕ್ಷಣ ಸವದಿ ಸೇರಿದಂತೆ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬರಬಹದು ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಬಳ್ಳಾರಿ ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕಾಗಿ ಗುರುವಾರ ನಗರಕ್ಕೆ ಆಗಮಿಸಿದ್ದ ಸಿ.ಟಿ ರವಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಲಕ್ಷಣ ಸವದಿ ಸೇರಿದಂತೆ, ಯಾರು ಯಾರು ದೇಶ ಮುಖ್ಯ ಎನ್ನುವವರು ಬೇರೆ ಬೇರೆ ಪಕ್ಷದಲ್ಲಿ ಇರಬಹದು ಅವರು ಬಿಜೆಪಿಗೆ ಬರಬೇಕು ಎಂದಿದ್ದಾರೆ. ಅಧಿಕಾರದ ಆಸೆ ಇಲ್ಲದೇ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬನ್ನಿ ಎಂದರು. ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆರಂಭದಲ್ಲಿ ಇಂಡಿಯಾ ಒಕ್ಕೂಟ ಒಂದೆರಡು ಮೀಟಿಂಗ್ ನಲ್ಲಿ ದೊಡ್ಡ ಸೌಂಡ್ ಮಾಡಿತ್ತು. ಮೂರನೇ ಮೀಟಿಂಗ್ ಡಮಾರ್ ಆಯ್ತು. ಲೋಕಸಭೆಯಲ್ಲಿ ನಾಲ್ಕು ನೂರು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು.

Previous articleಜನರಿಗೆ ಸ್ಪಷ್ಟವಾದ ಬೆದರಿಕೆ ಒಡ್ಡಿದ್ದಾರೆ
Next articleಒಂಬತ್ತು ವರ್ಷಗಳ ದೃಢವಾದ ಆರ್ಥಿಕ ಚಿತ್ರಣ