ಇಳಕಲ್ : ದೇಶದ್ರೋಹಿ ಹೇಳಿಕೆ ಕೊಡುವ ಕೀಳುಮಟ್ಟದ ಜನರ ವಿರುದ್ದ ನಾಗರಿಕರೇ ತಿರುಗಿ ಬೀಳುವ ಕಾಲ ದೂರವಿಲ್ಲ ಅವರಿಗೆ ಚಪ್ಪಲಿ ಸೇವೆಯಾಗುವದು ಖಂಡಿತ ಎಂದು ಹಿಂದು ಫೈರ್ ಬ್ರ್ಯಾಂಡ್ ನಾಯಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ಜನರು ದುರುದ್ದೇಶಪೂರ್ವಕವಾಗಿ ರಾಷ್ಟ್ರದ ಬಗ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ ಮೋದಿಯವರು ತೆಗೆದುಕೊಂಡ ನಿರ್ಧಾರದಿಂದಾಗಿ ಇಡೀ ಪಾಕಿಸ್ತಾನ ರಾಷ್ಟ್ರದಲ್ಲಿ ಬೆಂಕಿ ಹತ್ತಿಕೊಂಡಿದೆ ಸೈನ್ಯದ ಮುಖ್ಯಸ್ಥ ಓಡಿ ಹೋಗಿದ್ದಾರೆ ಅಲ್ಲಿನ ಪ್ರಧಾನಿ ಆಸ್ಪತ್ರೆ ಸೇರಿದ್ದಾರೆ ಆದರೆ ಮೋದಿಯವರ ಹಿಂದೆ ಇಡೀ ಜಗತ್ತು ಬೆಂಬಲವಾಗಿ ನಿಂತಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಪೋಲಿಸ್ ಅಧಿಕಾರಿ ಮೇಲೆ ಕೈ ಎತ್ತಿ ಒಂಟೆಕ್ಷರದಲ್ಲಿ ಮಾತನಾಡಿದ್ದು ಅವರ ಸಣ್ಣತನವನ್ನು ತೋರಿಸುತ್ತದೆ ಹಿಂದೆ ಐಎಎಸ್ ಅಧಿಕಾರಿ ಮೇಲೆಯೂ ಸಿದ್ದರಾಮಯ್ಯ ಹೀಗೆ ಮಾಡಿದ್ದರು ಇವರು ಹೀಗೇ ಮಾಡುತ್ತಾ ಹೊರಟರೆ ರಾಜ್ಯದ ಸಂಪೂರ್ಣ ಆಡಳಿತ ಕುಸಿದು ಹೋಗುತ್ತದೆ ಯಾರಿಗೂ ಎಲ್ಲಿಯೂ ಕೆಲಸ ಮಾಡಲು ಮನಸ್ಸು ಬರುವದೇ ಇಲ್ಲ ಆದ್ದರಿಂದ ಕೂಡಲೇ ಅಧಿಕಾರಿಗಳಿಗೆ ಕ್ಷಮೆ ಕೇಳಬೇಕು ಇನ್ನು ಮುಂದೆ ನೀವು ರಾಜ್ಯದಲ್ಲಾಗಲಿ ದೇಶದಲ್ಲಾಗಲಿ ಯಾವುದೇ ಸ್ಥಾನಮಾನ ಪಡೆಯುವದಿಲ್ಲ ಪಾಕಿಸ್ತಾನ ದೇಶದ ವಜೀರಾಮುಲ್ಲಾ ಆಗುವ ನೀವು ನಿಮ್ಮ ಪಟಾಲಂದ ಸಂತೋಷ ಲಾಡ್ ರಂತಹ ಬೆಂಬಲಿಗರನ್ನು ಕರೆದುಕೊಂಡು ಹೋಗಿ ಎಂದು ಸಲಹೆ ಮಾಡಿದರು.
ಮತ ಗಳಿಸಲು ಎಂದು ಈ ಪಹಲ್ಗಾಮ ದುರಂತವನ್ನು ಮೋದಿ ಮಾಡಿದ್ದಾರೆ ಎಂಬ ವಿರೋಧಿಗಳ ಆಪಾದನೆಗೆ ಉತ್ತರಿಸಿದ ಯತ್ನಾಳ ಈಗ ಯಾವ ಚುನಾವಣೆ ಇವೆ ಎಂದು ಇಂತಹ ನಾಟಕ ಮಾಡಬೇಕಾಗಿದೆ ವಿರೋಧಿಗಳ ಬಳಿ ಮಾತಾಡಲು ಏನು ವಿಷಯ ಇಲ್ಲ ಎಂದಾಗ ಇಂತಹ ಮಾತುಗಳು ಕೇಳಿ ಬರುತ್ತವೆ ಎಂದು ಕುಟುಕಿದರು.