ದೇವರ ವಿಗ್ರಹ ಬಳಿ‌‌ ದರ್ಶನ್ ಫೋಟೊ‌‌ ಇಟ್ಟು ಪೂಜೆ: ಅರ್ಚಕ ವಜಾ

0
11


ಬಳ್ಳಾರಿ: ದರ್ಶನ ತಪ್ಪು ಮಾಡಿ ಜೈಲಿಗೆ ಹೋಗಿದ್ರು ಅವರ ಅಭಿಮಾನಿಗಳಿಗೆ ಮಾತ್ರ ಅವರ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಇದು ಅಭಿಮಾನವೋ ಅಂಧಾಭಿಮಾನವೋ ಗೊತ್ತಿಲ್ಲ.
ದೇವಸ್ಥಾನವೊಂದರಲ್ಲಿ ದರ್ಶನ ಪೋಟೋ ಇಟ್ಟು ಪೂಜೆ ಮಾಡಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಐತಿಹಾಸಿಕ `ದೊಡ್ಡಬಸವೇಶ್ವರ ದೇವಸ್ಥಾನದಲ್ಲಿನ ಬೃಹತ್ ನಂದಿ ವಿಗ್ರಹದ ಮುಂದೆ ಅಮವಾಸ್ಯೆ ದಿನ ನಟ ದರ್ಶನ್ ಪೋಟೋಗಳನ್ನು ಪೂಜೆ ಮಾಡಿರುವುದರ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನನ ವಿವಿಧ ಭಂಗಿಯ ಪೋಟೋಗಳನ್ನು ದೇವರ ಮುಂದೆ ಇರಿಸಿ ಪೂಜಾರಿಗಳು ಪೂಜೆ ಮಾಡಿರುವ ಪೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ಧಾರ್ಮಿಕ ಇಲಾಖೆಯ ಸುಪರ್ಧಿಯಲ್ಲಿರುವ ದೇವಸ್ಥಾನದಲ್ಲಿ ಹೀಗೆ ಮಾಡುವುದು ಸರಿಯೇ,? ಎನ್ನುವ ಪ್ರಶ್ನೆ ಉದ್ಭವವಾಗಿದೆ.
ದರ್ಶನ ಅವರಿಗೆ ಒಳ್ಳೆಯದಾಗಲಿ, ಸಂಕಷ್ಟಗಳು ದೂರ ಆಗಲಿ ಎಂದು ಪೂಜೆ ಮಾಡಿಸಲಿ. ಅದು ಬಿಟ್ಟು ದೇವರ ಮುಂದೆ ಪೋಟೋ ಇಟ್ಟು ಪೂಜೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಅರ್ಚಕ ವಜಾ: ದೇವರ ವಿಗ್ರಹ ಬಳಿ ದರ್ಶನ ಫೋಟೊ‌ ಇಟ್ಟು ಪೂಜೆ ಮಾಡಿದ ಪ್ರಕರಣದ ವಿರುದ್ದ‌ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮಲ್ಲಿ ಎನ್ನುವಾತನನ್ನು ಅಮಾನತು ಮಾಡಿ‌ ಧಾರ್ಮಿಕ ದತ್ತಿ ಇಲಾಖೆ‌ ಆದೇಶ ಹೊರಡಿಸಿದೆ.

Previous articleಭೂ ಪರಿಹಾರ‌‌ ಒದಗಿಸಲು ಒತ್ತಾಯಿಸಿ ಕುಡತಿನಿ ಬಂದ್
Next articleKSRTC ಬಸ್ ಬೆಂಕಿಗಾಹುತಿ