ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಚಾವಣಿ, ಓರ್ವ ಸಾವು

ನವದೆಹಲಿ: ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಹಾಗೂ ಮುಂಜಾನೆ ಸುರಿದ ಮಳೆಯಿಂದಾಗಿ ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಚಾವಣಿ ಕುಸಿದು ಒಬ್ಬ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.
ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್‌ 1ರ ಬದಿಯಲ್ಲಿ ನಿಲ್ಲಿಸಲಾದ ಟ್ಯಾಕ್ಸಿಗಳ ಮೇಲೆ ಛಾವಣಿ ಕುಸಿದುಬಿದ್ದಿದೆ. ಕಾರು, ಟ್ಯಾಕ್ಸಿಗಳು ಜಖಂ ಆಗಿವೆ. ಓರ್ವ ಮೃತಪಟ್ಟಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು, ಮೃತರ ಕುಟುಂಬಕ್ಕೆ ₹20 ಲಕ್ಷ ಮತ್ತು ಗಾಯಗೊಂಡವರಿಗೆ ₹3 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ವಿಮಾನಗಳ ಕಾರ್ಯಾಚರಣೆಗಳನ್ನು ಹೊಂದಿರುವ ಟರ್ಮಿನಲ್‌1 ನಲ್ಲಿ ವಿಮಾನ ನಿರ್ಗಮನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಮತ್ತು ವಿಮಾನ ನಿಲ್ದಾಣದ ನಿರ್ವಾಹಕರು ಟಿ.1 ನಿಂದ ಟಿ.2 ಮತ್ತು ಟಿ.3 ಗೆ ತಾತ್ಕಾಲಿಕವಾಗಿ ಬೇರೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.