ಮುಂಡಗೋಡ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು, ರೈತರೇ ಅಲ್ಲ. ಅಲ್ಲಿ ಪ್ರತಿಭಟನೆಗೆ ಬರುವವರು ಟೊಯೋಟಾ ಕಾರಲ್ಲಿ ಬರುತ್ತಾರೆ, ರೈತರ ಬಳಿ ಅಷ್ಟೆಲ್ಲಾ ದುಡ್ಡಿದೆಯಾ…? ಇದು ಖಲಿಸ್ಥಾನಿಗಳ ಹೋರಾಟ. ರೈತರ ಹೆಸರಿಟ್ಟುಕೊಂಡಿದ್ದಾರೆ ಅಷ್ಟೇ. ಅವರಿಗೆ ಬೇರೆ ದೇಶದವರು ಹಣ ನೀಡುತ್ತಿದ್ದಾರೆ ಎಂದು ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರುವ ಮೂಲಕ ಮತ್ತೊಮ್ಮೆ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ಅವರು ಮುಂಡಗೋಡಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಹೋರಾಟಕ್ಕೆ ಬರುವ ರೈತರು ಅನ್ಯಾಯ ಆಗಿದೆ ಎಂದು ಬೆಂಜ್ ಗಾಡಿಯಲ್ಲಿ ಬರುವುದು, ಹೊಸ ಟ್ರ್ಯಾಕ್ಟರ್ ತಗೊಂಡು ಬರುತ್ತಿದ್ದಾರೆ. ಇದು ರೈತರ ಹೋರಾಟ ಅಲ್ಲ, ದೇಶದ್ರೋಹಿಗಳ ಹೋರಾಟ ಎಂದರು.