ಅಹಮದಾಬಾದ್: ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟ 270 ಜನರ ಪೈಕಿ ಡಿಎನ್‌ಎ ಪರೀಕ್ಷೆ ಮೂಲಕ 220 ಜನರ ಗುರುರು ಪತ್ತೆ ಹಚ್ಚಲಾಗಿದ್ದು, 202 ಜನರ ಮೃತದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗುಜರಾತ್‌ನ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಶುಕ್ರವಾರ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಏರ್ ಇಂಡಿಯಾದಲ್ಲಿ ಅಪಘಾತಕ್ಕೀಡಾವರ ಪೈಕಿ 151 ಭಾರತೀಯರ ಹಸ್ತಾಂತರಿಸಾಗಿದೆ. ಇನ್ನು 7 ಜನ ಪೋರ್ಚಗೀಸ್, 34 ಬ್ರಿಟಿಷ್, ಒಬ್ಬ ಕೆನಡಾದ ಪ್ರಜೆಗಳ ಮೃತದೇಹವನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆಯ ಕಟ್ಟಡದಲ್ಲಿ ಮೃತಪಟ್ಟ 9 ಜನರ ಮೃತದೇಹವನ್ನೂ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಬಿ.ಜೆ.ಮೆಡಿಕಲ್ ಕಾಲೇಜ್ ಕಟ್ಟಡಕ್ಕಪ್ಪಳಿಸಿತ್ತು.