ದಿಂಗಾಲೇಶ್ವರಶ್ರೀ ವಿರುದ್ಧ ಕುಮಾರಸ್ವಾಮಿ ದೂರು

0
19

ನವಲಗುಂದ : ಮೇ 2 ರಂದು ಪಟ್ಟಣದಲ್ಲಿ ನಡೆದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಿದ ಶಿರಹಟ್ಟಿ ಶ್ರೀ ಫಕೀರೇಶ್ವರಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿಂಗಾಲೇಶ್ವರ ಸ್ವಾಮೀಜಿಗಳು, ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ, ವಿವಿಧ ವರ್ಗಗಳ ನಡುವೆ ನಾಗರೀಕ ವೈರತ್ವ ಮತ್ತು ದ್ವೇಷ ಭಾವನೆ ಉಂಟು ಮಾಡುವ ರೀತಿ ಮಾತನಾಡಿದ್ದಾರೆ ಎಂದು ಹುಬ್ಬಳ್ಳಿ ಎಪಿಎಂಸಿಯ ಅಸಿಸ್ಟಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಆರ್ ಕುಮಾರಸ್ವಾಮಿ ತಂದೆ ಆರ್ ರಂಗಸ್ವಾಮಿ ಎಂಬುವವರು ನವಲಗುಂದ ಪೊಲೀಸ್ ಠಾಣೆಗೆ ಮೇ 4 ರಂದು ದೂರು ನೀಡಿದ್ದಾರೆ.

Previous articleಆರ್‌‌ಸಿಬಿಯ  ಹ್ಯಾಟ್ರಿಕ್‌ ಗೆಲುವಿನ ಅಧ್ಯಾಯ
Next articleಮತದಾನ ಹೆಚ್ಚಳಕ್ಕೆ ಏನು ಮಾಡಬೇಕು?