ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹4 ಲಕ್ಷ ನಗದು ವಶ

0
14

ರಾಯಚೂರು: ಕಾರಿನಲ್ಲಿ ದಾಖಲೆ ಇಲ್ಲದೆ 4 ಲಕ್ಷ ಹಣ ಸಾಗಿಸುತಿದ್ದಾಗ ಜಪ್ತಿ ಮಾಡಿದ ಘಟನೆ ನಡೆದಿದೆ.
ತಾಲೂಕಿನ ಸಿಂಗನೋಡಿ ಬಳಿಯ ಗಡಿಭಾಗದ ಚೆಕ್ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿ ಹಾಗೂ ಪೊಲೀಸರಿಂದ ವಾಹನಗಳ ತಪಾಸಣೆ ನಡೆಸಿದ್ದು, ಈ ವೇಳೆ ನೀಲಿ ಬಣ್ಣದ ಮಾರುತಿ ಶಿಫ್ಟ್ ಡಿಸೈರ್ ಕಾರಿನಲ್ಲಿ ಯಾವುದೇ ಪೂರಕ ದಾಖಲೆಗಳಿಲ್ಲದೆ 4 ಲಕ್ಷ ರು. ಸಾಗಿಸುತಿದ್ದಾಗ ಪರಿಶೀಲನೆ ಸಮಯದಲ್ಲಿ ಹಣ ಪತ್ತೆಯಾಗಿದ್ದು, ವಶಕ್ಕೆ ‌ಪಡೆದ ಆ ಹಣವನ್ನು ಜಿಲ್ಲಾ ಖಜಾನೆಗೆ ಜಮಾ ಮಾಡಿರುವುದಾಗಿ ಹಣ ಜಪ್ತಿ ಪರಿಹಾರ ಸಮಿತಿ ಅಧ್ಯಕ್ಷ, ಎಂಸಿಸಿ ನೋಡಲ್ ಅಧಿಕಾರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಮ ತಿಳಿಸಿದ್ದಾರೆ.

Previous articleಇನ್ನೂ ಎಷ್ಟು ವರ್ಷ ಮರಳು ಮಾಡ್ತೀರಿ
Next articleದಾಖಲೆ ಇಲ್ಲದ 38.50 ಲಕ್ಷ ಚಿನ್ನಾಭರಣ ಜಪ್ತಿ