ಬಳ್ಳಾರಿ: ಕೊಲೆ ಆರೋಪಿ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಜೈಲು ಸುತ್ತ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ಅವರನ್ನು ಚದುರಿಸಲು ಬೆತ್ತ ಪ್ರಹಾರ ಮಾಡಲಾಯಿತು.
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ದರ್ಶನ್ ಶಿಫ್ಟ್ ಸುದ್ದಿ ಕೇಳಿ ಕಳೆದ ಎರಡು ದಿನಗಳಿಂದ ಜೈಲು ಸುತ್ತ ಅವರ ಅಭಿಮಾನಿಗಳು ಸೇರುತ್ತಿದ್ದಾರೆ. ಜೈಲು ಪ್ರವೇದ ಮಾರ್ಗದ ವಾಲ್ಮೀಕಿ ವೃತ್ತ ಮತ್ತು ದುರ್ಗಮ್ಮ ಗುಡಿ ಸರ್ಕಲ್ ಬಳಿ ದರ್ಶನ್ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಇದರಿಂದಾಗಿ ಹೆಚ್ಚಿನ ಟ್ರಾಫಿಕ್ ಉಂಟಾಗಿತ್ತು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಅಭಿಮಾನಿಗಳನ್ನು ಜಾಗ ಖಾಲಿ ಮಾಡಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ ಚದುರಿಸಿದರು.